Wednesday, April 30, 2025
29.2 C
Bengaluru
LIVE
ಮನೆUncategorizedಕೋಲಾರದ ಕ್ಲಾಕ್​ ಟವರ್​ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

ಕೋಲಾರದ ಕ್ಲಾಕ್​ ಟವರ್​ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

ಕೋಲಾರ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಾನ್​ ಧ್ವಜವನ್ನು ತೆರವು ಮಾಡಿದ ವಿವಾದದ ಕಾವು ತಣ್ಣಗಾಗುವ ಮುನ್ನವೇ ಹಲವುಕಡೆ ಬೇರೆ ಬೇರೆ ಬಣ್ಣದ ಬಾವುಟಗಳ ಸದ್ದು ಜೋರಾಗಿದ್ದು ಕೋಲಾರವು ಸಹ ಇದಕ್ಕೆ ಹೊರತಾಗಿಲ್ಲ ಸದ್ಯ ಸಾಮಾಜಿಕ ಜಾಲತಾಣ ಗಳಲ್ಲಿ ಕೋಲಾರದ ಕ್ಲಾಕ್​ ಟವರ್​ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಕ್​ ಟವರ್​ ಪೋಟೋಗಳನ್ನು ಪೋಸ್ಟ್​ ಮಾಡಿ, ಕ್ಲಾಕ್ ಟವರ್​ ಮೇಲೆ ಹಾಕಲಾಗಿರುವ ಮುಸ್ಲಿಂ ಧರ್ಮದ ಸಂಕೇತ ಅರ್ಧ ಚಂದ್ರಾಕೃತಿ ಹಾಗೂ ನಕ್ಷತ್ರ ಇರುವ ಆಕೃತಿಯನ್ನು ತೆರವು ಮಾಡಬೇಕೆಂದು ಆಗ್ರಹಿಸಲಾಗಿದೆ ಹಲವರು ಆಗ್ರಹಿಸುತ್ತಿದ್ದಾರೆ, 19-03-2022ಕ್ಕೂ ಮೊದಲು ಕೋಲಾರದ ಕ್ಲಾಕ್​ ಟವರ್​ಗೆ ಹಸಿರು ಬಣ್ಣ ಬಳಿದು ಅಲ್ಲಿ ಮುಸ್ಲಿಂ ಧರ್ಮದ ಹಸಿರು ಧ್ವಜವನ್ನು ಹಾರಿಸಲಾಗುತ್ತಿತ್ತು, ಆದರೆ ಕೋಲಾರ ಸಂಸದ ಮುನಿಸ್ವಾಮಿ ಪ್ರತಿಭಟನೆ ಮಾಡಿ ಕ್ಲಾಕ್​ ಟವರ್​ ನಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಅಂದಿನ ಸರ್ಕಾರದಲ್ಲಿ ಒತ್ತಾಯ ಮಾಡಿದ ಪರಿಣಾಮ ಅಂದಿನ ಕೋಲಾರದ ಜಿಲ್ಲಾಧಿಕಾರಿ ವೆಂಕಟರಾಜ್​ ಮತ್ತು ಎಸ್ಪಿ ಡಿ.ದೇವರಾಜ್​ ಅವರು ಕ್ಲಾಕ್​ ಟವರ್ ಗೆ ಬಿಳಿ ಹಾಗೂ ತ್ರಿವರ್ಣ ಧ್ವಜದ ಬಣ್ಣ ಹಚ್ಚಲಾಗಿಯಿತು, ಆದರೆ ಅವತ್ತು ಕ್ಲಾಕ್ ಟವರ್ ಮೇಲೆ ಹಾಕಲಾಗಿದ್ದ ಮುಸ್ಲಿಂ ಧರ್ಮದ ಚಿಹ್ನೆಯನ್ನು ತೆಗೆಯಬೇಕೆಂದು ಒತ್ತಾಯ ಮಾಡಿದರಾದರೂ ಕೆಲ ಮುಸ್ಲಿಂ ಮುಖಂಡರು ಅಧಿಕಾರಿಗಳಲ್ಲಿ ಮನವಿ ಮಾಡಿ, ಕ್ಲಾಕ್​ ಟವರ್​ ರನ್ನು ನಿರ್ಮಾಣ ಮಾಡಿದ್ದು ಹಾಜಿ ಮೊಹಮದ್ ಮುಸ್ತಫಾ ಸಾಬ್ ಎನ್ನುವರು, ಅವರು ನಿರ್ಮಾಣ ಮಾಡಿ ನಂತರ ಅದನ್ನು ನಗರಸಭೆಗೆ ಬಿಟ್ಟು ಕೊಟ್ಟಿದ್ದರು. ಅಲ್ಲದೆ 1938 ಸೆಪ್ಟಂಬರ್​ನಲ್ಲಿ ಈ ಕ್ಲಾಕ್​ ಟವರ್ ಅನ್ನು ಮೈಸೂರು ಮಹಾರಾಜರಾದ ಕಂಠೀರವ ನರಸಿಂಹ ರಾಜ ಒಡೆಯರ್​ ಅವರು ಉಧ್ಘಾಟನೆ ಮಾಡಿದ್ದರು. ಅಂದಿನಿಂದಲೂ ಅದು ಹಾಗೆ ಇದೇ ಅದನ್ನು ಹಾಗೆ ಇರಲು ಬಿಡಿ ಎಂದು ಮನವಿ ಮಾಡಿದ್ದರು.

ಇದರ ಪರಿಣಾಮ ಅದರ ಎತ್ತರವನ್ನು ಕಡಿಮೆ ಮಾಡಿ ಅದನ್ನು ಮೊದಲಿನಂತೆ ಬಿಡಲಾಯಿತು ಜೊತೆಗೆ ರಾಷ್ಟ್ರಧ್ವಜವನ್ನು ಅದಕ್ಕಿಂತ ಎತ್ತರದಲ್ಲಿ ಹಾರಿಸುವಂತೆ ವ್ಯವಸ್ಥೆ ಮಾಡಲಾಯಿತು ಅಂದಿನಿಂದ ಕ್ಲಾಕ್​ ಟವರ್​ನಲ್ಲಿ ಸ್ವತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನದಂದು ನಗರಸಭೆಯಿಂದ ಕ್ಲಾಕ್​ ಟವರ್ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತಿದೆ ಆದರೆ ಈಗ ಕ್ಲಾಕ್ ಟವರ್​ ನಗರಸಭೆ ಆಸ್ತಿ ಅಂದರೆ ಸರ್ಕಾರದ ಆಸ್ತಿ ಅದರ ಮೇಲೆ ಒಂದು ಧರ್ಮದ ಚಿಹ್ನೆ ಇರುವ ಚಿಹ್ನೆ ಯನ್ನು ತೆಗೆಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಲಾಗುತ್ತಿದೆ ಈ ಮೂಲಕ ಕ್ಲಾಕ್ ಟವರ್ ಮತ್ತೆ ವಿವಾದದ ಕೇಂದ್ರವಾಗಿದ್ದು ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿವೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments