ಗದಗ: ಎ. ಜೆ ಸದಾಶಿವ ವರದಿಯನ್ನು ಜಾರಿಗೋಳಿಸಬಾರದು ಎಂದು ರಾಜ್ಯಾಧ್ಯಂತ ಅನೇಕ ಶಾಂತಿಯುತ ಹಾಗೂ ಕ್ರಾಂತಿಕಾರಿ ಹೋರಾಟಗಳನ್ನು ಮಾಡಿ, ಲಾಠಿ ರುಚಿ ತಿಂದಿದ್ದೇವೆ, ಕೇಸ್ ಹಾಕಿಸಿಕೊಂಡಿದ್ದೇವೆ. ಇಷ್ಟಾದರೂ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಜಾರಿಗೋಳಿಸಲು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು ಖಂಡನೀಯ. ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಹೆಚ್ ಕೆ ಪಾಟೀಲರಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ.
ಸದಾಶಿವ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡುವುದಿಲ್ಲ ಎಂದು ಸುಳ್ಳು ಭರವಸೆ ನೀಡಿ ಈಗ ಕೇಂದ್ರಕ್ಕೆ ಸಿಪಾರಸ್ಸು ಮಾಡಿದ್ದು ದುರಂತದ ಸಂಗತಿ. ಹಿಗಾಗಿ ಅತೀ ಶಿಘ್ರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಿ ಕಾನೂನು ಸಚಿವ ಹೆಚ್ ಕೆ ಪಾಟೀಲ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ರಾಜ್ಯ ಸರ್ಕಾರ ಹಾಗೂ ಕಾನೂನು ಸಚಿವ ಹೆಚ್ ಕೆ ಪಾಟೀಲರಿಗೆ ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ್ ಅಂಗಡಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾ: ಎ. ಜೆ. ಸದಾಶಿವ ಆಯೋಗದ ವರದಿ ದುರಹಂಕಾರದಿಂದ ಕೂಡಿದೆ. ಈ ವರದಿ ಸೋರಿಕೆಯಾಗಿದೆ. ದಲಿತ ಸಮುದಾಯದ ಒಳಗೆ ಪರಸ್ಪರ ದ್ವೇಷ, ಅನುಮಾನ, ವೈಭವೀಕರ, ಅಪಮಾನ, ಅವಹೇಳನ ಸೇರಿದಂತೆ ಇತ್ಯಾದಿ ಕಲ್ಪನೆ ಬಿತ್ತುತ್ತಿರುವುದು ಒಂದು ಕಡೆಯಾದರೇ, ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಯಿಂದ ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿಯ 101ಜಾತಿಗಳ ಜನಾಂಗಕ್ಕೆ ಅನ್ಯಾಯವಾಗಿದೆ ಎಂದರು.
ಒಳ ಮೀಸಲಾತಿಯನ್ನು 4ಗುಂಪುಗವನ್ನಾಗಿ ವಿಂಗಡಿಸಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ರಷ್ಟು ಹೆಚ್ಚಿಸಿ, ಎಡಗೈ ಸಮುದಾಯಕ್ಕೆ ಶೇ. 5.5, ಬಲಗೈ ಸಮುದಾಯಕ್ಕೆ ಶೇ. 5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ. 4.5, ಅಲೆಮಾರಿ ಸಮುದಾಯಕ್ಕೆ ಶೇ. 1.5ಒಳಮೀಸಲಾತಿಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಸಿಪಾರಸ್ಸು ಮಾಡಿ, ಲಂಬಾಣಿ, ಭೋವಿ ಸೇರಿದಂತೆ ವಿವಿಧ ಸಮುದಾಯ ಇದನ್ನು ತಿರಸ್ಕಾರ ಮಾಡಿ ಬಿಜೆಪಿ ವಿರುದ್ದ ಮತ ಚಲಾಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ ಎಂದರು.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೇಸ್ ಸರ್ಕಾರ ರದ್ದುಪಡಿಸಿದ ಸದಾಶಿವ ಆಯೋಗವನ್ನು ಮತ್ತೆ ಮುನ್ನಲೆಗೆ ತಂದು ಸಚಿವ ಸಂಪುಟದಲ್ಲಿ ಸಂವಿಧಾನದ 341(3) ತಿದ್ದುಪಡಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಇದು ಪರೋಕ್ಷವಾಗಿ ಸದಾಶಿವ ಆಯೋಗ ವರದಿ ಜಾರಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಒಳಮಿಸಲಾತಿ ಜಾರಿ ಶಿಫಾರಸ್ಸು ಎಂದು ಹೇಳುತ್ತಾ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೇಲಸ ಕಾಂಗ್ರೇಸ್ ಸರ್ಕಾರ ಮಾಡುತ್ತಿದೆ ಎಂದು ಅಸಮಧಾನ ಹೊರಹಾಕಿದರು.
ಸಿಎಂ ಸಿದ್ದರಾಮಯ್ಯನವರು ಸೋರಿಕೆಯಾದ ವರದಿಯನ್ನು ಕೇಂದ್ರಕ್ಕೆ ಸಿಪಾರಸ್ಸು ಮಾಡಿದ್ದು ನಾಚಿಗೆಡಿತನ. ಜನ ನಿಮ್ಮನ್ನು ನಂಬಿ ಮತ ಹಾಕಿದ್ದಾರೆ. ಆದರೆ, ನಿವು ನಮ್ಮ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದಿರಿ. ನಿಮ್ಮ ಒಳಮರ್ಮವನ್ನು ರಾಜ್ಯಾಧ್ಯಂತ ಸಂಚರಿಸಿ ಪ್ರತಿ ಮನೆಗೆ ತೆರಳಿ ನಿಮ್ಮ ದ್ವಿಮುಖ ನೀತಿಯನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ಮಂತ್ರಿಗಳು ಹಾಗೂ ಶಾಸಕರ ಮನೆಗಳಿಗೆ ತೆರಳಿ ಮುತ್ತಿಗೆ ಹಾಕುತ್ತೇವೆ. ರಾಜ್ಯಾಧ್ಯಂತ ದೊಡ್ಡ ಮಟ್ಟದ ಹೋರಾಟದ ಮಾಡುತ್ತೇವೆ. ಹೋರಾಟದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೇ ರಾಜ್ಯ ಸರ್ಕಾರವೇ ನೇರ ಹೊಣೆ. ನಮ್ಮ ಹೋರಾಟದಲ್ಲಿ ವಿವಿಧ ಮಠಗಳ ಮಠಾಧಿಶರು ಬೆಂಬಲ ನೀಡಲಿದ್ದಾರೆ ಎಂದರು.