ಜಿಲ್ಲೆ

ಇಂದು ಐತಿಹಾಸಿಕ ಕರಗ ಮಹೋತ್ಸವಕ್ಕೆ ಚಾಲನೆ

ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ರಾತ್ರಿ ಚಾಲನೆ ದೊರೆಯಲಿದೆ.

11 ದಿನಗಳ ಕರಗ ಮಹೋತ್ಸವಕ್ಕೆ ಸಕಲ ತಯಾರಿ ನಡೆದಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಇದರೊಂದಿಗೆ ಎ. ಜ್ಞಾನೇಂದ್ರ 15 ಬಾರಿ ಕರಗ ಹೊತ್ತಂತಾಗಲಿದೆ. ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಏಪ್ರಿಲ್ 14ರವರೆಗೆ, ಒಟ್ಟು 11 ದಿನಗಳ ಕಾಲ ನಡೆಯಲಿದೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗ ಮಹೋತ್ಸವಕ್ಕೆ, ರಾತ್ರಿ 10 ಗಂಟೆಗೆ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ದೊರೆಯಲಿದೆ.

Comments (0)

Your email address will not be published. Required fields are marked *

Back to top button