ಬೆಂಗಳೂರು: ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಶಕ್ತಿ ಕೊಡುವ ಕೆಲಸ ಮಾಡ್ತಾ ಇದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಎಲ್ಲಾ ವರ್ಗದ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ, ವರ್ಷಕ್ಕೆ 1 ಲಕ್ಷ ಕೊಡುತ್ತೇವೆ ಅಂತ ಹೇಳಿದ್ದೇವೆ. ಹೆಣ್ಣು ಮಕ್ಕಳ ಬಗ್ಗೆ ಅಗೌರವ ದಿಂದ ಮಾತನಾಡುತ್ತಿದ್ದಾರೆ. ವೋಟ್ ಬ್ಯಾಂಕ್ ಅಲ್ಲ ಅವರ ಜೀವನದ ಬ್ಯಾಂಕ್ ಎಂದರು.
ದೇಶದಲ್ಲಿ ಎನ್ಡಿಎ ಅಧಿಕಾರಕ್ಕೆ ಬರುತ್ತೆ ಅನ್ನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ವೇಗಳ ಬಗ್ಗೆ ನನಗೆ ನಂಬಿಕೆ ಇಲ್ಲ, ಇಂಡಿಯಾಗೆ ಪವರ್ ಬರುತ್ತೆ ಎಂದು ನುಡಿದರು.
ದೇವೇಗೌಡರು ದಾಖಲೆ ಇದ್ರೆ ಬಿಡುಗಡೆ ಮಾಡಲಿ, ದೇವೇಗೌಡರ ಚಿಲ್ಲರೆ ಸೆಂಟ್ಮೆಂಟ್ ಗೆ ನಾನು ಉತ್ತರ ಕೊಡಲ್ಲ, ಐದು ಗ್ಯಾರಂಟಿ ಕಂಟಿನ್ಯೂ ಇರುತ್ತೆ, ಗ್ಯಾರಂಟಿ ಇನ್ನೂ ಒಂಬತ್ತು ವರ್ಷ ಕಂಟಿನ್ಯೂ ಆಗುತ್ತೆ.ರಾಜ್ಯದಲ್ಲಿ ಗ್ಯಾರಂಟಿ ರದ್ದು ಆಗಲ್ಲ,ಚುನಾವಣೆ ಮುಗಿದ ಬಳಿಕವೂ ಗ್ಯಾರಂಟಿ ಇರುತ್ತೆ ಎಂದರು.