ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದೆ. ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನಲೆ ಶಾಸಕರಿಗೆ ಮದ್ಯಾಹ್ನ ವಿಶ್ರಾಂತಿ ಪಡೆಯಲು ಸ್ಷೀಕರ್ ಯು.ಟಿ.ಖಾದರ್ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಈ ವಿಚಾರ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರ ದಿವಾಳಿ ಆಗಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ನೀಡಲು ಸರ್ಕಾರದ ಬಳಿ ಹಣವಿಲ್ಲ. ಯಾವುದೇ ಅಭಿವೃದ್ದಿ ಕೆಲಸಕ್ಕೆ ಅನುದಾನಕ್ಕೂ ಹಣವಿಲ್ಲ. ಆದ್ರೂ ಸಹ ಶಾಸಕರಿಗೆ ರಿಕ್ಲೈನರ್ ಚೇರ್ ಅವಶ್ಯಕತೆ ಇತ್ತಾ? ಎಂದು ಸರ್ಕಾರದ ವಿರುದ್ದ ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ಸ್ಪೀಕರ್ ಯು.ಟಿ.ಖಾದರ್, ರಿಕ್ಲೈನರ್ ಚೇರ್ ಗಳನ್ನು ಖರೀದಿ ಮಾಡಿಲ್ಲ. ವರ್ಷಪೂರ್ತಿ ವಿಧಾನಸಭೆಯ ಕಲಾಪ ನಡೆಯುವಿಲ್ಲ. ವರ್ಷದಲ್ಲಿ 30 ದಿನ ಮಾತ್ರ ಕಲಾಪ ನಡೆಯುತ್ತೆ. ಹೀಗಾಗಿ, ಚೇರ್ ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದರು.


