ಮನರಂಜನೆಸಿನಿಮಾಸುದ್ದಿ

ಸೆಲ್ಫಿ ಕೊಡೋದ್ರಲ್ಲೇ ಬ್ಯುಸಿ ಆದ ಗಿಲ್ಲಿ ನಟ..!ಸೆಲೆಬ್ರಿಟಿಗಳ ಮನೆಯಲ್ಲಿ ಗಿಲ್ಲಿ ಹವಾ!

ಬಿಗ್ ಬಾಸ್ ಕನ್ನಡ 11ರ ಟ್ರೋಫಿ ಗೆದ್ದ ನಂತರ ಗಿಲ್ಲಿ ನಟರಾಜ್ ಅವರ ಜನಪ್ರಿಯತೆ ಗಗನಕ್ಕೇರಿದೆ. ಒಂದೂವರೆ ತಿಂಗಳ ಹಿಂದೆ ಸಾಮಾನ್ಯ ಯುವಕನಾಗಿ ಮನೆ ಪ್ರವೇಶಿಸಿದ್ದ ನಟರಾಜ್, ಇಂದು ಸ್ಯಾಂಡಲ್‌ವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ದಿನವಿಡೀ ಅಭಿಮಾನಿಗಳ ಮುತ್ತಿಗೆ, ಸಾಲು ಸಾಲು ಇಂಟರ್ವ್ಯೂಗಳು ಮತ್ತು ಸಿನಿಮಾ ಗಣ್ಯರ ಭೇಟಿಯಲ್ಲಿ ಅವರು ಅದೆಷ್ಟು ಬ್ಯುಸಿಯಾಗಿದ್ದಾರೆ ಎಂದರೆ, ಅವರಿಗೆ ಮನೆಗೆ ಹೋಗಿ ನೆಮ್ಮದಿಯಾಗಿ ಊಟ ಮಾಡಲು ಕೂಡ ಸಮಯ ಸಿಗದಂತಾಗಿದೆ.

ಗಿಲ್ಲಿ ಲಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕಿಚ್ಚ ಸುದೀಪ್ ಅವರಿಂದ ಹಿಡಿದು ಶಿವರಾಜ್‌ಕುಮಾರ್ ಅವರಂತಹ ಸ್ಟಾರ್‌ಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಗಿಲ್ಲಿ ನಟರಾಜ್ ಈಗ ಸ್ವತಃ ಒಬ್ಬ ದೊಡ್ಡ ಸೆಲೆಬ್ರಿಟಿ ಆಗಿ ಬೆಳೆದಿದ್ದಾರೆ. ಅವರು ಎಲ್ಲೇ ಹೋದರೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಿರುವುದು ಅವರ ಸ್ಟಾರ್ ಪವರ್‌ಗೆ ಸಾಕ್ಷಿಯಾಗಿದೆ. ಅದೃಷ್ಟ ಅಂದ್ರೆ ಗಿಲ್ಲಿ ನಟರಾಜ್ ಅವರದ್ದೇ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಕೇವಲ ಫೋಟೋಗಳಿಗಷ್ಟೇ ಸೀಮಿತವಾಗದೆ, ಗಿಲ್ಲಿ ಅವರಿಗೆ ಈಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಿಂದ ಆಫರ್‌ಗಳು ಹರಿದು ಬರುತ್ತಿವೆ ಎನ್ನಲಾಗಿದೆ. ಅವರ ಹಳ್ಳಿಯ ಸರಳತೆ ಮತ್ತು ಈಗಿನ ಗ್ಲಾಮರಸ್ ಲೈಫ್ ಎರಡೂ ಸಮ್ಮಿಶ್ರವಾಗಿ ಹೊಸ ಸಂಚಲನ ಮೂಡಿಸಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಎಂಬ ವೇದಿಕೆ ಗಿಲ್ಲಿ ನಟನ ಬದುಕನ್ನೇ ಬದಲಿಸಿದ್ದು, ಇಂದಿನ ಯುವಕರಿಗೆ “ಕನಸು ಕಂಡರೆ ನನಸಾಗುತ್ತೆ” ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ.

Comments (0)

Your email address will not be published. Required fields are marked *

Back to top button