ಬೆಂಗಳೂರು: ಚನ್ನಪಟ್ಟಣದ ಕಾಂಗ್ರೆಸ್ ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧ ಮೊದಲ ಪತ್ನಿ ಹಾಗೂ ಪುತ್ರಿ ತಿರುಗಿಬಿದ್ದಿದ್ದಾರೆ. ಸಿಪಿ ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ಗೆ ಮೊದಲ ಪತ್ನಿ ಮಾಳವಿಕಾ ಸೋಲಂಕಿ ಹಾಗೂ ಮಗಳು ನಿಶಾ ಯೋಗೇಶ್ವರ್ ದೂರು ನೀಡಿದ್ದಾರೆ.
ಕೆಪಿಸಿಸಿ ಕಚೇರಿಗೆ ಆಗಮಿಸಿ ಕರ್ನಾಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿ ಮಾಡಿ ಯೋಗೇಶ್ವರ್ ಪತ್ನಿ ಮಾಳವಿಕಾ ಸೋಲಂಕಿ ಮತ್ತು ಪುತ್ರಿ ನಿಶಾ ಸಿಪಿವೈ ವಿರುದ್ಧ ದೂರು ನೀಡಿದ್ದಾರೆ.
ಸಿ.ಪಿ ಯೊಗೇಶ್ವರ್ ತಮ್ಮದೇ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಪದೇ ಪದೇ ಕೊರ್ಟ್ನಲ್ಲಿ ಕೇಸ್ ಹಾಕಿ ತೊಂದರೆ ಕೊಡುತ್ತಿದ್ಧಾರೆ. ತಂದೆಯ ಉಪದ್ರವ ಹೆಚ್ಚಾಗುತ್ತಿದೆ. ಇದನ್ನು ಸರಿಪಡಿಸಿಕೊಡಿ ಎಂದು ಸುರ್ಜೇವಾಲ ಬಳಿ ಮನವಿ ಮಾಡಿದ್ರು. ಮನವಿ ಆಲಿಸಿದ ಸುರ್ಜೇವಾಲ ಸಮಾಧಾನ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಕಳುಹಿಸಿದ್ಧಾರೆ ಎಂದ್ರು ನಿಶಾ ಯೋಗೇಶ್ವರ್.


