ಧಾರವಾಡ: ಕಷ್ಟಪಟ್ಟು ಬೆಳೆದ ಬೆಳೆ ಕಾಯಿ ಕಟ್ಟದ ಹಿನ್ನಲೆ ಬೆಳೆಯನನ್ನೇ ಅನ್ನದಾತ ಕಿತ್ತು ಹಾಕಿರುವ ಘಟನೆ ಧಾರವಾಡ ತಾಲ್ಲೂಕಿನ ಲೋಕೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಚಂದ್ರು ತಮ್ಮ 10 ಎಕರೆ ಜಮೀನಿನಲ್ಲಿ ಸೋಯಾಬಿನ ಬೆಳೆ ಮಾಡಿದ್ದರು. ಗಿಡಗಳು ಸಹ ಚೆನ್ನಾಗಿಯೆ ಬಂದಿದ್ದವು. ಬೆಳೆ ನೋಡುತ್ತಾ ರೈತ ಚಂದ್ರು ಈ ಬಾರಿ ನನ್ನ ಕಷ್ಟಗಳು ದೂರಾಗಹುದು ಎಂಬ ನಿರೀಕ್ಷೆಯಲ್ಲಿ ಹೊಂದಿದ್ದರು.ಆದರೆ ಮೊನ ಕಾಲೆತ್ತರಕ್ಕೆ ಸೋಯಾಬಿನ್ ಬೆಳೆದ್ರೂ ಸಹ ಕಾಯಿ ಮಾತ್ರ ಬಿಟ್ಟಿಲ್ಲ.
ಹತ್ತು ಎಕರೆ ಜಮೀನಿನಲ್ಲಿ ಸೋಯಾಬಿನ್ ಬೆಳೆದಿದ್ದು, ಪ್ರತಿ ಎಕರೆಗೆ 20 ಸಾವಿರ ಖರ್ಚು ಸಹ ಮಾಡಿದ್ದರು. ಆದರೆ,ಇದುವರೆಗೂ ಸೋಯಾಬಿನ್ ಬೆಳೆಯಲ್ಲಿ ಕಾಯಿ ಬಿಡದೇ ಹೋಗಿದ್ದರಿಂದ ರೈತ ಕಂಗಾಲಾಗಿದ್ದು ಗಿಡಗಳನ್ನು ಕಿತ್ತು ಹಾಕಿದ್ದಾನೆ. ಇಂತ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಂಕಷ್ಟಕ್ಕೆ ನೇರವಾಗಬೇಕು ಎನ್ನುವುದು ಸ್ಥಳೀಯರ ಮನವಿ ಮಾಡಿದ್ದಾರೆ.