ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿ ನಗರದ 57ನೇಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶಿಸಿದೆ. ಮೈಸೂರಿನಲ್ಲಿರುವ ವಯೋ ಸಹಜ ಆರೋಗ್ಯ ಸಮಸ್ಯೆಗಳನ್ನು ನರಳುತ್ತಿರುವ 76 ವರ್ಷದ ತನ್ನ ತಾಯಿಯನ್ನು ಕಂಡು ಆರೈಕೆ ಮಾಡಬೇಕಿದೆ. ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ತನ್ನ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಅಭಿಪ್ರಾಯ ಪಡೆಯಬೇಕಿದೆ. ಹಾಗಾಗಿ, ನಾಲ್ಕು  ವಾರಗಳ ಕಾಲ ಮೈಸೂರಿಗೆ ಹೋಗಿ ನೆಲೆಸಲು ಅನುಮತಿ ನೀಡಬೇಕು ಎಂದು ಕೋರಿ ದರ್ಶನ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮೈಸೂರಿಗೆ ತೆರಳಿ, ಎರಡು ವಾರಗಳ ಕಾಲ ನೆಲೆಸಲು ಅನುಮತಿ ನೀಡಿ ಆದೇಶಿಸಿದೆ. ದರ್ಶನ್ ಅವರು ಡಿ.20ರಿಂದ ಮೈಸೂರಿಗೆ ತೆರಳಬಹುದು.2025 ರ ಜ.5 ರವರೆಗೆ ಮೈಸೂರಿನಲ್ಲಿಯೇ ನೆಲೆಸಬಹುದು ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಇದರಿಂದ ಪ್ರಕರಣ ಸಂಬಂಧ ಮೈಸೂರಿನಿಂದಲೇ ಬಂಧನವಾಗಿದ್ದ ದರ್ಶನ್, ಆರು ತಿಂಗಳ ನಂತರ ಮರಳಿ ಮೈಸೂರಿಗೆ ಹೋಗಲು ಅವಕಾಶ ಸಿಕ್ಕಿದೆ. ಇದೇ ವೇಳೆ ಜಗದೀಶ್ ಹಾಗೂ ಅನುಕುಮಾರ್‌ಗೆ ಚಿತ್ರದುರ್ಗಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಅವರು ಚಿತ್ರದುರ್ಗದ ನಿವಾಸಿಗಳಾಗಿದ್ದಾರೆ ಅವರ ಕುಟುಂಬದವರು ಅಲ್ಲಿಯೇ ನೆಲೆಸಿದ್ದಾರೆ. ಕುಟುಂಬಸ್ಥರ ಭೇಟಿ ಮಾಡುವುದಕ್ಕಾಗಿ ಚಿತ್ರದುರ್ಗಕ್ಕೆ ತೆರಳಿ ಜ.10ರವರೆಗೆ ನೆಲಸಲು ಈ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಅನುಮತಿ ನೀಡಿದೆ.

 

 

 

 

Leave a Reply

Your email address will not be published. Required fields are marked *

Verified by MonsterInsights