ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ನಾನಾ ಅವಾಂತರ ಸೃಷ್ಟಿಸಿದೆ.
ಲಿಂಗಾಪುರದ ವಲ್ಲಿ ಎಸ್ಟೇಟ್ ನಿಂದ ಬಂದ ಒಂಟಿ ಕಾಡಾನೆ ನಗರದಲ್ಲಿ ಅಬ್ಬರಿಸಿದೆ. ಆಟೋ ಚಾಲಕ ಜೆರ‍್ರಿ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಜಖಂ ಮಾಡಿದೆ. ಕಾಡಾನೆಗಳಿಂದ ನಿರಂತರವಾಗಿ ಇಂತಹ ಘಟನೆಗಳು ನಡೆಯತ್ತಿದ್ದು ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ತಗೋಬೇಕು.. ಕಾರ್ ಮಾಲಿಕನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ರು.