
ಬೀದರ್; ಎರಡು ವರ್ಷದ ಮಗುವಿನ ಮೇಲೆ ಹರಿದ ಇನ್ನೋವಾ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬೀದರ್ನಲ್ಲಿ ನಡೆದಿದೆ. ನಗರದ ಹಾರೋಗೇರಿ ಬಡಾವಣೆಯಲ್ಲಿರುವ ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ ಮುಂಭಾಗದಲ್ಲಿ ಧಾರುಣ ಘಟನೆ ನಡೆದಿದೆ.
ಹಾರೊಗೇರಿ ನಿವಾಸಿಗಳಾದ ಸತೀಶ ಹಾಗೂ ಸಂಗೀತಾ ಪಾಟೀಲ ಪುತ್ರ ಬಸವಚೇತನ ಮೃತ ದುರ್ದೈವಿ. ನಿನ್ನೆ ಮದ್ಯಾಹ್ನ ಅತ್ತೆ ಮನೆಗೆಂದು ತೆರಳಿದ್ದ ಬಸವಚೇತನ ರಸ್ತೆ ಬದಿಯಲ್ಲಿ ಆಟವಾಡುತ್ತ ನಿಂತಿದ್ದಾನೆ.

ಆ ಸಮಯದಲ್ಲಿ ಯಮಧೂತನಂತೆ ಬಂದ ಇನ್ನೊವಾ ಕ್ರಿಸ್ಟಾ ಕಾರು ಬಾಲಕನ ಮೇಲೆ ಹರಿದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..




