ವಿಜಯಪುರ: ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ ನೀಡಿರುವ ಬಗ್ಗೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ. ಅದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಈಗಲಾದರೂ ಅರ್ಥವಾಗಿದೆ. ಈ ದೇಶದ ವ್ಯವಸ್ಥೆಯಲ್ಲಿ ಯಾಕೆ ರಾಜೀನಾಮೆ ನೀಡಿದ್ರು..? ಅವರಿಗೆ ಈ ರೀತಿ ಒತ್ತಡ ಯಾಕೆ ಬಂದಿದೆ..? ಅಥವಾ ಅವರೇ ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟರು ಎಂಬದನ್ನು ಬಿಜೆಪಿ ಅವರ ಬಳಿಯೇ ಕೇಳಬೇಕು ಎಂದು ಹೇಳಿದ್ರು.
ಧರ್ಮಸ್ಥಳ ಘಟನೆ ಕುರಿತು ರಚಿಸಲಾದ ಎಸ್ಐಟಿಯಿಂದ ಸೌಜನ್ಯ ಪ್ರಕರಣವನ್ನು ಕೈ ಬಿಟ್ಟ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ಕೇಸನ್ನು ಬಿಡಲು ಸಾಧ್ಯವಿಲ್ಲ. ಬಿಡೋದು ಇಲ್ಲ. ಸಿಎಂ ಸಿದ್ದರಾಮಯ್ಯನವರು ಹಾಗೂ ಗೃಹ ಸಚಿವ ಪರಮೇಶ್ವರ್ ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳುತ್ತಾರೆ. ಯಾವುದೇ ತಪ್ಪಿತಸ್ಥರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅವರು ಎಷ್ಟೇ ದೊಡ್ಡವರಾದರು ಕೈ ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.


