ಬೆಂಗಳೂರು: ಕಾರು ಚಾಲಕನ ಮುಖಕ್ಕೆ ಉಗಿದು ದುರ್ವತನೆ ತೋರಿದ್ದ ಆಟೋ ಚಾಲಕನನ್ನ ಹೆಚ್ ಎ ಎಲ್ ಪೊಲೀಸ್ರು ಬಂಧಿಸಿದ್ದಾರೆ.
ಆಟೋ ಚಾಲಕ ಬಾಬಾಸಾಬ್ ನ ಹೆಚ್.ಎ.ಎಲ್ ಪೊಲೀಸರು ಬಂಧಿಸಿದ್ದಾರೆ.
ಮಾರತಹಳ್ಳಿಯ ಯಮಲೂರು ಸಿಗ್ನಲ್ ಬಳಿ ಕಾರು ಹಾಗೂ ಆಟೋ ಚಾಲಕನ ನಡುವೆ ಕಿರಿಕ್ ಆಗಿತ್ತು. ಕಿರಿಕ್ ಆಗ್ತಿದ್ದಂತೆ ಕಾರಿನ ಮಿರರ್ ಗೆ ಹೊಡೆದು ಬಾಬಾಸಾಬ್ ಅತಿರೇಕರದ ವರ್ತನೆ ತೋರಿ ಅವ್ಯಾಚ ಶಬ್ಧಗಳಿಂದ ನಿಂದಿಸಿ, ಕಾರು ಚಾಲಕನ ಮುಖಕ್ಕೆ ಉಗಿದಿದ್ದ. ವಿದ್ಯಾರ್ಥಿಗಳು ಆಟೋದಲ್ಲಿ ಇದ್ದಾಗಲೇ ಆಟೋ ಚಾಲಕ ಅನುಚಿತ ವರ್ತನೆ ತೋರಿದ್ನಂತೆ.
ಕಾರು ಚಾಲಕ ಅಲೆಕ್ಸ್ ಬೋಬಿ ವೆಂಪಲ ನೀಡಿದ ದೂರಿನ ಮೇಲೆ ಆಟೋ ಚಾಲಕನ ಮೇಲೆ ಎಫ್.ಐ.ಆರ್. ಸದ್ಯ ಆಟೋ ಚಾಲಕ ಬಾಬಾಸಾಬ್ ಬಂಧಿಸಿ ಪೊಲೀಸ್ರು ಬಿಸಿ ಮುಟ್ಟಿಸಿದ್ದಾರೆ.