Freedom TV

ದಳಪತಿ ಪಕ್ಷದ ಬಾವುಟ ಬಿಡುಗಡೆ

ಚೆನ್ನೈ: ತಮಿಳುನಾಡು ಚಿತ್ರರಂಗಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧಿವಿದೆ. ಇಲ್ಲಿಯ ಮತದಾರರು ನಟ, ನಟಿಯರನ್ನು ಶಾಸಕರಿಂದ ಹಿಡಿದು ಸಿಎಂ, ಸಂಸದರು, ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಹೀಗಾಗಿ ಇಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷಗಳಿವೆ. ಅಂತಹ ಪಕ್ಷಗಳ ಸಾಲಿಗೆ ಸೂಪರ್ ಸ್ಟಾರ್ ನಟ ದಳಪತಿ(thalapathy vijay) ವಿಜಯ್ ಅವರು ‘ತಮಿಳಿಗ(Tamiliaga Vetri Kazhagam) ವೆಟ್ರಿ ಕಳಗಂ’ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಅದರ ಬಾವುಟವನ್ನು ಬಿಡುಗಡೆ ಮಾಡಿದರು.

ಪಕ್ಷದ ಕಚೇರಿಯಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಪಕ್ಷದ(TVK) ಬಾವುಟ(flag) ಬಿಡುಗಡೆಗೊಳಿಸಲಾಗಿದೆ. ಎರಡು ಕಡೆ ಕಂದು ಬಣ್ಣವಿದ್ದು, ಮಧ್ಯದಲ್ಲಿ ಹಳದಿ ಬಣ್ಣವಿದೆ. ಎಡ ಹಾಗೂ ಬಲಕ್ಕೆ ಆನೆಗಳಿವೆ. ಮಧ್ಯದಲ್ಲಿ ನವಿಲು ಇದ್ದು, ಸುತ್ತಲು ನಕ್ಷತ್ರಗಳಿವೆ. ಈ ಮೂಲಕ ತಮಿಳುನಾಡಿನ ಮಣ್ಣಿನ ಸಂದೇಶವನ್ನು ಇದರಲ್ಲಿ ಹೇಳಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಪಕ್ಷದ ಹೆಸರು ಘೋಷಣೆ ಮಾಡುವ ಮೂಲಕ ರಾಜಕೀಯಕ್ಕೆ ಬರುವ ಬಗ್ಗೆ ಹೇಳಿದ್ದರು. ಈಗ ಬಾವುಟ ಬಿಡುಗಡೆ ಮಾಡಿದರು.

Comments (0)

Your email address will not be published. Required fields are marked *

Back to top button