ಫ್ರೀಡಂ ಟಿವಿ : ಸೂಪರ್ ಸ್ಟಾರ್ ರಜಿನಿಕಾಂತ್ ರಾಮ ಮಂದಿರ ಭೇಟಿ ಬಳಿಕ “ಸಂಘಿ” ರಜಿನಿ ಎಂದು ಭಾರಿ ಟೀಕೆಗೆ ಗುರಿಯಾಗಿದ್ದಾರೆ. ತಲೈವಾ ಸಂಘಿ ಎಂಬ ಬರಹ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ ,ತಮಿಳು ಚಿತ್ರ ರಂಗದ ಮೇರು ನಟ ಸೂಪರ್ ಸ್ಟಾರ್ ರಜಿನಿಕಾಂತ್ ಇತ್ತೀಚಿಗೆ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ ,ತಮಿಳು ನಟ ವಿಜಯ್ ಕುರಿತು ರಜಿನಿ ಹಗುರವಾಗಿ ಮಾತನಾಡಿದ್ರು ಎಂಬ ವಿಚಾರವು ಕೆಲ ದಿನಗಳ ಹಿಂದೆ ವಿಜಯ್ ಅಭಿಮಾನಿಗಳ ಖಾರವಾದ ಟೀಕೆಗೆ ಗುರಿಯಾಗಿದ್ರು.
ಆದ್ರೀಗ ರಜಿನಿ ವಿರುದ್ಧ ಒಂದು ಸಮುದಾಯವೇ ತಿರುಗಿ ಬಿದ್ದಿದೆ ,ನಾನು ರಾಜಕಾರಣಿಯಲ್ಲ ನಾನೊಬ್ಬ ನಟ ಎನ್ನುತ್ತಿದ್ದ ರಜಿನಿಗೆ ಕೇಸರಿ ಶಾಲಿನ ಮೇಲೆ ಯಾಕೆ ಅಷ್ಟು ಆಸಕ್ತಿ ,ತಮಿಳುನಾಡು, ಕರ್ನಾಟಕ,ಕೇರಳದಲ್ಲಿ ಅದೆಷ್ಟೋ ಸಜ್ಜನ ಸ್ವಾಮೀಜಿಗಳು ಇರಬೇಕಾದ್ರೆ ,ದೂರದ ಉತ್ತರ ಪ್ರದೇಶದ ವಿವಾದಿತ ಯೋಗಿ ಆದಿತ್ಯನಾಥ್ ಅವರ ಆಶೀರ್ವಾದ ಪಡೆಯಲು ಹೋಗ್ತಾರೆ ,ವಯಸ್ಸಿಗೆ ಅತ್ಯಂತ ಕಿರಿಯ ವ್ಯಕ್ತಿಯಾಗಿರೋ ಯೋಗಿ ಆದಿತ್ಯನಾಥ್ ಪಾದಗಳನ್ನ ಹಿಡೀತಾರೆ ಅನ್ನೋದು ಅವರಲ್ಲಿನ ಸಂಘಿ ತತ್ವಗಳನ್ನ ತೋರಿಸುತ್ತದೆ ಎಂದು ಸ್ಟಾಲಿನ್ ಪಕ್ಷದ ಸಂಸದರೇ ರಜಿನಿಯನ್ನ ಖಂಡತುಂಡವಾಗಿ ಟೀಕಿಸಿದ್ದರೂ.
ಆ ಟೀಕೆಗಳಿಗೆ ಪುಷ್ಠಿ ನೀಡುವಂತೆ ಮೊನ್ನೆಯ ರಾಮ ಪ್ರಾಣ ಪ್ರತಿಷ್ಠಾಪಾನೆಯಲ್ಲಿ ಅತಿಥಿಯಾಗಿ ಪಾಲ್ಗೊಂಡ ರಜಿನಿಯ ವೇಷಭೂಷಣವು ಎಡಪಂಥಿಯರನ್ನ ಕೆರಳಿಸಿದ್ದು ಸುಳ್ಳಲ್ಲ ,ಕೇಸರಿ ಶಾಲಿನೊಂದಿಗೆ ಬಿಜೆಪಿಯ ಬಿಜೆಪಿಯ ಮತ್ತು ಸಂಘಪರಿವಾರದ ಮುಖಂಡರೊಂದಿಗೆ ಭಾರಿ ಉತ್ಸುಕತೆಯಲ್ಲಿ ಕಂಡು ಬಂದ ರಜಿನಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು . ಇನ್ನೂ ಆ ಫೋಟೋ ಬಿಹಂಚಿಕೊಂಡ ತಮಿಳುನಾಡಿನ ಕೆಲ ರಾಜಕಾರಣಿಗಳು ತಲೈವಾ ಸಂಘಿ ಎಂಬ ಕ್ಯಾಪ್ಶನ್ ಕೊಟ್ಟು ಟ್ವೀಟ್ ಕೂಡ ಮಾಡಿದ್ರು.
ಅದಕ್ಕೆ ಪ್ರತಿಕ್ರಿಯಿಸಿ ತಲೈವಾ ಹೇಳಿದ್ದು ‘500 ವರ್ಷಗಳ ಹಿಂದಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಪರಿಹಾರ ಒದಗಿಸಿದೆ.
ಈ ದಿನ ಅಂದ್ರೆ ರಾಮಲಲ್ಲಾ ಪ್ರತಿಷ್ಠಾಪನೆಯ ದಿನ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ದಿನ’ ಎಂಬಹೇಳಿಕೆ ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಪ್ರಕ್ರಿಯೆ ನೀಡಿದ್ದರು. ನನಗೆ ಸಂಘಿ ತತ್ವಗಳ ಮೇಲೆ ಆಸಕ್ತಿ ಇದ್ದದ್ದೇ ಆಗಿದ್ದರೆ ,ಲಾಲ್ ಸಲಾಂ ಎಂಬ ಮುಸ್ಲಿ ಪಾತ್ರವನ್ನ ಮಾಡುತ್ತಿರಲಿಲ್ಲ ನನ್ನನ್ನ ಹೀಗೆಲ್ಲ ಹೇಳಿ ಬಣ್ಣಿಸಬೇಡಿ ಎಂದು ಕಟುವಾಗೇ ಉತ್ತರಿಸಿದ್ದರು. ಇನ್ನು ಸಂಘಿ ರಜಿನಿ ಎಂಬ ವಿವಾದಕ್ಕೆ ಉತ್ತರಿಸಿದ ರಜಿನಿ ಪುತ್ರಿ ಐಶ್ವರ್ಯ ಭಾವುರಾಗಿದ್ದು ಸೇರಿದ್ದವರ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿತ್ತು.
‘ನನ್ನ ತಂದೆ ‘ಸಂಘಿ’ ಅಲ್ಲ’ ಎಂದು ಸ್ಪಷ್ಟವಾಗಿ ಹೇಳಿದ ಐಶ್ವರ್ಯ ತಂದೆಯ ಪ್ರತಿಕ್ರಿಯೆಯನ್ನೇ ಪುನರುಚ್ಚರಿಸಿದ ಪುತ್ರಿ ಐಶ್ವರ್ಯ ರಜನೀಕಾಂತ್, ‘ಲಾಲ್ ಸಲಾಂ’ ಹೆಸರಿನ ಸಿನಿಮಾದ, ಸಿನಿಮಾದ ಆಡಿಯೋ ಲಾಂಚ್ನಲ್ಲಿ ತಂದೆಯ ಬಗ್ಗೆ ಭಾವುಕರಾಗಿ ಮಾತನಾಡಿದರು. ‘ನನ್ನ ತಂದೆಯನ್ನು ಕೆಲವರು ‘ಸಂಘಿ’ ಅಂದ್ರೆ (ಆರ್ಎಸ್ಎಸ್ಗೆ ಸೇರಿದವರು) ಎಂದು ಕರೆದಿದ್ದಾರೆ. ಇದನ್ನು ಕೇಳಿ ನನಗೆ ಆಕ್ರೋಶ ಬಂತು. ನನ್ನ ತಂದೆ ಸಂಘಿ ಅಲ್ಲ. ಒಂದೊಮ್ಮೆ ಅವರು ಸಂಘಿ ಆಗಿದ್ದಿದ್ದರೆ ‘ಲಾಲ್ ಸಲಾಂ’ ರೀತಿಯ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಒಬ್ಬ ಸಂಘಿ ವ್ಯಕ್ತಿ ಈ ಸಿನಿಮಾದಲ್ಲಿ ನಟಿಸುವುದಿಲ್ಲ. ನಾನು ಏಕೆ ಹೀಗೆ ಹೇಳುತ್ತಿದ್ದೀನಿ ಎಂಬುದು ನಿಮಗೆ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ನಟಿಸಲು ಧೈರ್ಯ ಬೇಕಿತ್ತು, ಅದು ಕೆಲವರಲ್ಲೇ ಇದೆ. ಅದರಲ್ಲಿ ನನ್ನ ತಂದೆ ರಜನೀಕಾಂತ್ ಸಹ ಒಬ್ಬರು’ ಎಂದು ಹೇಳಿ ಭಾವುಕರಾಗಿದ್ದಾರೆ.
ತಮಿಳು ಸಿನಿಮಾವನ್ನ ಆಳಿದ ಅನೇಕ ದಿಗ್ಗಜರಲ್ಲಿ ಸೂಪರ್ ಸ್ಟಾರ್ ರಜಿನಿ ಕೂಡಾ ಒಬ್ಬರೂ ,ತನ್ನದೇ ಆದ ಛಾಪನ್ನ ಮೂಡಿಸಿರೋ ರಜಿನಿಗೆ ಸಂಘಿ ಪಟ್ಟ ಕಟ್ಟಿರುವುದು ಮಾತ್ರ ತಲೈವಾ ಅಭಿಮಾನಿಗಳನ್ನ ಕೆರಳಿಸಿರುವುದು ಸುಳ್ಳಲ್ಲ ,ಮುಂದೆ ಯಾವ ತಿರುವನ್ನ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.