ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ತುಮಕೂರಿನ ಮೇಲೆ ಕೋಪನಾ? ಈ ಪ್ರಶ್ನೆಯನ್ನು ತುಮಕೂರು ಜಿಲ್ಲೆಯ ಜನ ಪ್ರಶ್ನಿಸುತ್ತಿದ್ದಾರೆ. ಯಾಕೆಂದರೆ ತುಮಕೂರಿಗೆ ನಮ್ಮ ಮೆಟ್ರೋ ರೈಲು ಬೇಡ ಅಂತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದು, ಅದು ವಿವಾದಕ್ಕೆ ಕಾರಣವಾಗಿದೆ.
ತುಮಕೂರಿನವರೆಗೂ ನಮ್ಮ ಮೆಟ್ರೋ ರೈಲನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇದು ಮೂರ್ಖತನದ್ದು ಅಂತ ತೇಜಸ್ವಿ ಸೂರ್ಯ ವಿರೋಧಿಸಿದ್ದಾರೆ. ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು ಓಡಿಸುವುದು ಮೂರ್ಖತನದ್ದು, ಕರ್ನಾಟಕ ಸರ್ಕಾರದ ನಿರ್ಧಾರವೇ ಮೂರ್ಖತನದ್ದು, ಅದರ ಬದಲು ಬಾಕಿರುವ ರೈಲು ಮಾರ್ಗಗಳನ್ನು ಪೂರ್ಣಗೊಳಿಸಿ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನ ಒಳಗಡೆ ವಾಹನ ದಟ್ಟಣೆ ಇಳಿಕೆಗೆ ಕ್ರಮಕೈಗೊಳ್ಳಿ, ನಗರದೊಳಗಷ್ಟೇ ಮೆಟ್ರೋ ರೈಲುಗಳ ಓಡಾಟ ಉಪಯೋಗ. ತುಮಕೂರಿಗೆ ಮೆಟ್ರೋ ರೈಲು ಬಿಡುವ ಬದಲು, ಉಪನಗರ ರೈಲುಗಳ ಮೂಲಕ ಬೆಂಗಳೂರು ಸಂಪರ್ಕಿಸುವುದು ಸೂಕ್ತ ಎಂದು ಹೇಳಿದ್ದಾರೆ.