Thursday, November 20, 2025
19.5 C
Bengaluru
Google search engine
LIVE
ಮನೆರಾಜಕೀಯಡಿ.ಕೆ. ಶಿವಕುಮಾರ್​ ಭೇಟಿಯಾದ ತೇಜಸ್ವಿ ಸೂರ್ಯ: ಟನಲ್ ರೋಡ್ ಕುರಿತು ಚರ್ಚೆ

ಡಿ.ಕೆ. ಶಿವಕುಮಾರ್​ ಭೇಟಿಯಾದ ತೇಜಸ್ವಿ ಸೂರ್ಯ: ಟನಲ್ ರೋಡ್ ಕುರಿತು ಚರ್ಚೆ

ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಯೋಜಿಸಿರುವ ಸುರಂಗ ರಸ್ತೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಡಿಸಿಎಂ ಡಿ.ಕೆ ಶಿವಕುಮಾರ್​ ಅವರನ್ನ ಭೇಟಿಯಾಗಿದ್ದಾರೆ..

ಸದಾಶಿವನಗರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಉಪ ಮುಖ್ಯಮಂತ್ರಿಗಳ ಜೊತೆಗೆ ಒಂದು ಗಂಟೆಗೂ ಹೆಚ್ಚು ಸಮಯ ಚರ್ಚೆ ಮಾಡಿದ್ದು, ಬೆಂಗಳೂರು ಟ್ರಾಫಿಕ್ , ಗುಂಡಿ ಸಮಸ್ಯೆ ಬಗ್ಗೆ ವಿಸ್ತೃತವಾದ ಮಾತುಕತೆ ನಡೆದಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಡಿಸಿಎಂ ಡಿಕೆಶಿ ಭೇಟಿ ಬಳಿಕ ಮಾತನಾಡಿದ ಅವರು, ವಿಶೇಷವಾಗಿ ಟನಲ್ ರೋಡ್ ಕುರಿತು ಚರ್ಚೆ ಮಾಡಲಾಗಿದ್ದು, ಟ್ರಾಫಿಕ್ ಕಡಿಮೆ ಆಗಬೇಕು ಅಂದ್ರೆ ನಮ್ಮ ರಸ್ತೆಗಳಲ್ಲಿರುವ ವಾಹನಗಳ ಸಂಖ್ಯೆ ಕಡಿಮೆಯಾಗಬೇಕು‌.

ಶೇ.70ರಷ್ಟು ಜನ ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವಂತೆ ಮಾಡಬೇಕು. 300 ಕಿ.ಮೀ. ಮೆಟ್ರೋ ಕನೆಕ್ಟಿವಿಟಿ ಜೊತೆಗೆ, 3 ನಿಮಿಷಕ್ಕೊಂದು ಮೆಟ್ರೋ ಸಿಗುವಂತೆ ಆಗಬೇಕು. ಜನ ಇರುವ ಜಾಗದಿಂದ 5 ನಿಮಿಷ ನಡೆದುಕೊಂಡು ಹೋದ್ರೆ ಮೆಟ್ರೋ ಸ್ಟೇಷನ್ ಸಿಕ್ಕರೆ ಸಾರ್ವಜನಿಕ ಸಾರಿಗೆಯತ್ತ ಜನರು ಮುಖ ಮಾಡುತ್ತಾರೆ. ಮಾಸ್ಟರ್ ಪ್ಲ್ಯಾನ್​​ನಲ್ಲಿರುವಂತೆ 300 ಕಿ.ಮೀ. ಸಬ್ ಅರ್ಬನ್ ರೈಲು ಕೂಡ ಬೆಂಗಳೂರಿಗೆ ಅವಶ್ಯಕತೆ ಇದೆ ಎಂದು ತಿಳಿಸಿರೋದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments