ಬೆಂಗಳೂರು: ಮಾರತ್ತಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅತುಲ್ ಆತ್ಮಹತ್ಯೆ ಪ್ರಕರಣ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದಾರೆ.ಮಾರತ್ತಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ತನಿಖೆಯನ್ನ ಆರಂಭಿಸಿದ್ದು,ಮಾರತ್ತಳ್ಳಿ ಇನ್ಸ್ಪೆಕ್ಟರ್ ತನಿಖಾಧಿಕಾರಿಯಾಗಿದ್ದಾರೆ. ಎರಡು ತಂಡಗಳನ್ನ ರಚನೆ ಮಾಡಿ ತನಿಖೆ ನಡೆಸ್ತಿದ್ದಾರೆ.ಮೃತನ ತಮ್ಮ ಕೊಟ್ಟಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು,ಸಾಕ್ಷಿ ಆಧಾರದ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗ್ತಿದೆ. ಇದುವರೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಬಂಧನ ಮಾಡಿಲ್ಲ.ಯಾರಿಗೂ ನೋಟೀಸ್ ಕೂಡ ಯಾರಿಗೂ ಸರ್ವ್ ಮಾಡಿಲ್ಲ.ಮೃತ ವ್ಯಕ್ತಿಗೆ ನ್ಯಾಯ ಕೊಡಿಸೋದು ನಮ್ಮ ಜವಬ್ದಾರಿ ಮತ್ತು ಕರ್ತವ್ಯ ಆ ನಿಟ್ಟಿನಲ್ಲಿ ತನೆಖೆ ನಡೆಸಲಾಗ್ತಿದೆ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸೋದಾಗಿ ಕಮಿಷನರ್ ಹೇಳಿದ್ರು.


