ರಾಜಕೀಯರಾಜ್ಯಸುದ್ದಿ

ಮನೆ ಮೇಲಿನ ಜಾಹೀರಾತಿಗೂ ಟ್ಯಾಕ್ಸ್: ವಿಧಾನಪರಿಷತ್‌ನಲ್ಲಿ ಹೊಸ ವಿಧೇಯಕ ಅಂಗೀಕಾರ; ವಿಪಕ್ಷಗಳ ತೀವ್ರ ವಿರೋಧ!

ಬೆಂಗಳೂರು: ರಾಜ್ಯ ಸರ್ಕಾರದ ಹೊಸ ತೆರಿಗೆ ನೀತಿಯು ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಸಮರಕ್ಕೆ ಕಾರಣವಾಗಿದೆ. ಖಾಸಗಿ ಜಾಗ ಹಾಗೂ ಮನೆಗಳ ಮೇಲೆ ಹಾಕುವ ಜಾಹೀರಾತುಗಳಿಗೂ ತೆರಿಗೆ ವಿಧಿಸುವ ‘ಕರ್ನಾಟಕ ಮುನ್ಸಿಪಾಲಿಟಿ ತಿದ್ದುಪಡಿ ವಿಧೇಯಕ-2026’ ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ.

“ಜೀವನಕ್ಕೆ ಏನೋ ಒಂದು ಮಾಡಿಕೊಂಡಿರುವ ಬಡವರ ಮನೆ ಮೇಲಿನ ಜಾಹೀರಾತಿಗೂ ಟ್ಯಾಕ್ಸ್ ಹಾಕುವಷ್ಟು ಸರ್ಕಾರ ಬರಗೆಟ್ಟಿದೆಯೇ?” ಎಂದು ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಖಾರವಾಗಿ ಪ್ರಶ್ನಿಸಿದರು. “ರಾಜಕಾರಣಿಗಳು ಹಾಕುವ ಫ್ಲೆಕ್ಸ್‌ಗಳಿಗೆ ಟ್ಯಾಕ್ಸ್ ಇಲ್ಲ, ಆದರೆ ಸಾಮಾನ್ಯರ ಮನೆ ಮೇಲಿನ ಬೋರ್ಡ್‌ಗೆ ಯಾಕೆ ತೆರಿಗೆ?” ಎಂಬ ಪ್ರಶ್ನೆ ಸದನದಲ್ಲಿ ಮೊಳಗಿತು.

“ಸರ್ಕಾರಿ ಜಾಗದಲ್ಲಿ ಜಾಹೀರಾತು ಹಾಕಿದರೆ ತೆರಿಗೆ ಹಾಕಲಿ, ಆದರೆ ಖಾಸಗಿ ಸ್ವತ್ತಿನ ಮೇಲೆ ಯಾಕೆ? ಈ ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕಬೇಕು” ಎಂದು ಪ್ರತಿಪಕ್ಷ ನಾಯಕ ನಾರಾಯಣಸ್ವಾಮಿ ಒತ್ತಾಯಿಸಿದರು. ತೆರಿಗೆ ಸಂಗ್ರಹಿಸದಿದ್ದರೆ ನಗರ ಪಾಲಿಕೆಗಳನ್ನು ನಡೆಸುವುದು ಕಷ್ಟ ಮತ್ತು ಈಗಾಗಲೇ ನೂರಾರು ಕೋಟಿ ರೂ. ನಷ್ಟವಾಗಿದೆ.

ಈ ತೆರಿಗೆಯನ್ನು ಕಟ್ಟಡದ ಮಾಲೀಕರು ಕಟ್ಟಬೇಕಿಲ್ಲ, ಬದಲಾಗಿ ಅಲ್ಲಿ ಜಾಹೀರಾತು ಪ್ರದರ್ಶಿಸುವ ಕಂಪನಿಗಳು ಪಾವತಿಸಬೇಕು.

Comments (0)

Your email address will not be published. Required fields are marked *

Back to top button