Top Newsರಾಜಕೀಯರಾಜ್ಯಸುದ್ದಿ

ಟಾಕ್ಸಿಕ್’ ಟ್ರೋಲ್‌ಗಳಿಗೆ ತಾರಾ ಸುತಾರಿಯಾ ಖಡಕ್ ಉತ್ತರ..!?

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್, ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಬಿಡುಗಡೆಯ ಹೊಸ್ತಿಲಲ್ಲಿದ್ದು, ಚಿತ್ರದ ತಾರಾಗಣದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ಭಾರತೀಯ ಚಿತ್ರರಂಗದ ಐವರು ಖ್ಯಾತ ನಟಿಯರು ಬಣ್ಣ ಹಚ್ಚುತ್ತಿರುವುದು ವಿಶೇಷ. ಲೇಡಿ ಸೂಪರ್ ಸ್ಟಾರ್ ನಯನತಾರಾ , ಕಿಯಾರಾ ಅಡ್ವಾಣಿ , ಹುಮಾ ಖುರೇಷಿ , ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಮತ್ತು ಸ್ಯಾಂಡಲ್ ವುಡ್ ನ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ನಟಿ ತಾರಾ ಸುತಾರಿಯಾ ಅವರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ವೀರ್ ಪಹಾರಿಯಾ ಅವರೊಂದಿಗಿನ ಬ್ರೇಕಪ್ ವದಂತಿಗಳು ಮತ್ತು ಗಾಯಕ ಎಪಿ ಧಿಲ್ಲೋನ್ ಅವರ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಈ ಕುರಿತು ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿರುವ ತಾರಾ, ವರ್ಷಗಳು ಉರುಳಿದಂತೆ ಮನಸ್ಸಿನ ಶಾಂತಿ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿತಿದ್ದೇನೆ ಮತ್ತು ಯಶಸ್ಸಿಗಿಂತ ವ್ಯಕ್ತಿತ್ವ ಹಾಗೂ ಮೌಲ್ಯಗಳು ತಮಗೆ ಮುಖ್ಯ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ತಮ್ಮ ಬಗ್ಗೆ ಹರಡುತ್ತಿರುವ ಗಾಸಿಪ್‌ಗಳಿಗೆ ತಲೆಕೆಡಿಸಿಕೊಳ್ಳದ ತಾರಾ, ಸತ್ಯ ಏನೆಂಬುದು ತಮಗೂ ಮತ್ತು ತಮ್ಮ ಆಪ್ತರಿಗೂ ತಿಳಿದಿದ್ದರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ. ಅಲ್ಲದೆ, ಇನ್ಸ್ಟಾಗ್ರಾಮ್ ಮೂಲಕ ಪ್ರತಿಕ್ರಿಯಿಸಿ, ಸುಳ್ಳು ಕಥೆಗಳು ಅಥವಾ ಪೇಯ್ಡ್ ಪಿಆರ್ ತಂತ್ರಗಳು ತಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ 1980ರ ದಶಕದ ಗೋವಾದ ಡ್ರಗ್ ಕಾರ್ಟೆಲ್ ಹಿನ್ನೆಲೆಯ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ತಾರಾ ಸುತಾರಿಯಾ ಅವರ ‘ರೆಬೆಕಾ’ ಎಂಬ ಗನ್ ಹಿಡಿದ ಇಂಟೆನ್ಸ್ ಲುಕ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

Comments (0)

Your email address will not be published. Required fields are marked *

Back to top button