ಅಯೋಧ್ಯೆಯ ಶ್ರೀರಾಮನ ಪಾದುಕೆ ಹೇಗಿದೆ ಗೊತ್ತಾ..?

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಾಂಕ ನಿಗಧಿ ಮಾಡಲಾಗಿದೆ. ಮೂಲಗಳ ಪ್ರಕಾರ, 2024 ಜನವರಿ 24 ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಅದ್ದೂರಿ ಪೂಜೆ ನಡೆಯಲಿದೆ. ಈಗಾಗಲೇ ಶ್ರೀರಾಮ ಮಂದಿರ ಓಪನಿಂಗ್ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಹೊರ ಬಿದ್ದಿದೆ.

ರಾಮಮಂದಿರ ಉದ್ಘಾಟನೆ ದಿನಕ್ಕಾಗಿ ಸಾವಿರಾರು ಭಾರತೀಯರು ಕಾತುರದಿಂದ ಕಾಯುತ್ತಿದ್ದಾರೆ. ಅದರ ಬೆನ್ನಲೇ ಇದೀಗ ಶ್ರೀ ರಾಮನಿಗೆ ಅರ್ಪಿಸುವ ಪಾದುಕೆಗಳ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಪಾದುಕೆಗಳನ್ನು ಅಯೋಧ್ಯೆ ಗೆ ಅರ್ಪಿಸುವ ಮುನ್ನ ದೇಶಾದ್ಯಂತ ದೇವಾಲಗಳಿಗೆ ಸಮರ್ಪಿಸಿ, ಬಳಿಕ ರಾಮಮಂದಿರಕ್ಕೆ ನೀಡಲಾಗುತ್ತದೆ. ಇನ್ನು ಈ ಪಾದುಕೆಗಳ ವಿಶೇಷತೆ ನೋಡೋದಾದರೇ,

ಈ ಚರಣ ಪಾದುಕೆಗಳನ್ನು ಹೈದರಾಬಾದಿನ ಶ್ರೀಚಲ್ಲ ಶ್ರೀನಿವಾಸ ಶಾಸ್ತ್ರಿ ರಚಿಸಿದ್ದು, 1 kg ಚಿನ್ನ ಹಾಗೂ 9 kg ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ಇನ್ನು ರಾಮಲಾಲಾ ವಿಗ್ರಹವನ್ನು ರಾಮಮಂದಿರ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಇವರ ಜೊತೆ ಇನ್ನು ಮೂವರು ನಿರ್ಮಿಸಿದ್ದಾರೆ.
ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್ . ಡಿ. ದೇವೇಗೌಡಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತದೆ.




