Top Newsಕ್ರೈಂ ಸ್ಟೋರಿಸುದ್ದಿ

ಕ್ಯಾಂಟರ್‌ಗೆ ಕಾರು ಡಿಕ್ಕಿ- ನಾಲ್ವರು ಧಾರುಣ ಸಾವು

ಬಾಗಲಕೋಟೆ: ಕ್ಯಾಂಟರ್  ಹಾಗೂ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಧನ್ನೂರು ಎಂಬಲ್ಲಿ ನಡೆದಿದೆ.

ಲಕ್ಷ್ಮಣ ವಡ್ಡರ್ (55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕಮಕ್ಕಳು (50) ಹಾಗೂ ಕಾರು ಚಾಲಕ ರಫಿಕ್ ಮುಲ್ಲಾ(25) ಸಾವಿಗೀಡಾದವರು. ಮೃತರು ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದವರು ಎಂದು ಗುರುತ್ತಿಸಲಾಗಿದೆ. ತಡರಾತ್ರಿ ಸುಮಾರು 2 ಗಂಟೆಗೆ ಘಟನೆ ನಡೆದಿದೆ.

ಕಾರು ಮುದ್ದೇಬಿಹಾಳ ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ಬರುತ್ತಿತ್ತು. ಈ ವೇಳೆ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ನಜ್ಜುಗುಜ್ಜಾಗಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button