ಚಿಕ್ಕಬಳ್ಳಾಪುರ: ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯ ಭೀಕರ ಅಪಘಾತ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗೇರಿಹಳ್ಳಿ ಗೇಟ್ ಎಂಬ ಗ್ರಾಮದಲ್ಲಿ ನಡೆದಿದೆ.
ನಿತೀಶ್ (17), ನಿತಿನ್(17), ವೈಭವ್(16), ವಿದ್ಯಾರ್ಥಿಗಳು ಮೃತಪಟ್ಟಿದವರು. ಮೃತರು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ನಿವಾಸಿಗಳು ಎಂದು ಗುರುತ್ತಿಸಲಾಗಿದೆ. ಚಿಕ್ಕಬಳ್ಳಾಪುರ ಬಿಜಿಎಸ್ ಶಾಲೆಯಲ್ಲಿ ನಿತೀಶ್ ಮತ್ತು ನಿತಿನ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಇನ್ನು ಚಿಕ್ಕಬಳ್ಳಾಪುರ ವೈಭವ್ ಗುಡ್ ಶೆಫರ್ಡ್ ಶಾಲೆಯಲ್ಲಿ ವೈಭವ್ ಎಸ್ ಎಸ್ ಎಲ್ ಸಿ ಓದುತ್ತಿದ್ದರು.
ಮೂವರು ವಿದ್ಯಾರ್ಥಿಗಳು ಟ್ಯೂಷನ್ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತೆರೆಳುವಾಗ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.