ಆರ್ಸಿಬಿ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ.. ಏನ್ ಗೊತ್ತಾ?

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರನ್ನು ಹೆಚ್ಚ ಹೆಚ್ಚು ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ಟಿ20 ವರ್ಲ್ಡ್ಕಪನ್ನಲ್ಲಿ ಎರಡು ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ಗೆ ಪ್ರಾಯೋಜಕತ್ವ (sponsorship) ನೀಡಲು ಮುಂದಾಗಿದೆ.
ಐಪಿಎಲ್ನಲ್ಲಿ ಎಲ್ಲ ಟೀಮ್ಗಳ ಹೆಸರು ಒಂದು ಕಡೆಯಾದರೆ, ಆರ್ಸಿಬಿಯ ಹೆಸರಿಗೆ ಇರುವ ಕ್ರೇಜ್ ಬೇರೆಯದ್ದೆ ಇದೆ. ವಿದೇಶದಲ್ಲೂ ಆರ್ಸಿಬಿ ಅಭಿಮಾನಿಗಳು ಇರುವುದು ಸಾಮಾನ್ಯವಾಗಿದೆ. ಐಪಿಎಲ್ ಬಂದರೆ ಆರ್ಸಿಬಿಯ ಪ್ರತಿ ಸುದ್ದಿಯು ಕೂಡ ಅಭಿಮಾನಿಗಳಿಗೆ ಮುಖ್ಯವಾಗಿರುತ್ತದೆ. ಟೂರ್ನಿಯಲ್ಲಿ ಹವಾ ಕ್ರಿಯೇಟ್ ಮಾಡುವ ಆರ್ಸಿಬಿಗೆ ಕೆಎಂಎಫ್ ಸಿಹಿ ಸುದ್ದಿ ನೀಡಿದೆ.
2025ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸ್ಪಾನ್ಸರ್ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ. ತಮ್ಮ ಬಜೆಟ್ ಅನುಗುಣವಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ ಜೊತೆ ಮಾತುಕತೆ ನಡೆಸಲು ಯೋಜಿಸಲಾಗಿದೆ. ಬಜೆಟ್ಗೆ ಒಪ್ಪಿದರೆ ಸ್ಪಾನ್ಸರ್ ಮಾಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಹೇಳಿದ್ದಾರೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ತಂಡದ ಆಟಗಾರರ ಜೆರ್ಸಿ ಮೇಲೆ ನಂದಿನಿ ಬ್ರ್ಯಾಂಡ್ ಹೆಸರು ಕಾಣಿಸಿಕೊಂಡಿತ್ತು. ಇದರಂತೆ ಆರ್ಸಿಬಿ ಹಾಗೂ ಕೆಎಂಎಫ್ ನಡುವಿನ ಮಾತುಕತೆ ಯಶಸ್ವಿಯಾದರೆ ಆರ್ಸಿಬಿ ಜೆರ್ಸಿ ಮೇಲೆ ನಂದಿನ ಬ್ರ್ಯಾಂಡ್ ರಾರಾಜಿಸಲಿದೆ.




