ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ..
ಪೋಕ್ಸೋ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ದೇವನಹಳ್ಳಿ ಪಿಎಸ್‌ಐ ಸಂತ್ರಸ್ತೆ ಕಡೆಯವರ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದು, PSI ಜಗದೇವಿ, ಅಂಬರೀಷ್ ಗೆ ಲಂಚ ಕೊಡಲು ಹೇಳಿದ್ದ ಆಡಿಯೋ ವೈರಲ್ ಆಗಿದೆ.. 75 ಸಾವಿರ ಲಂಚ ಪಡೆಯಲು PSI ಜಗದೇವಿ ಮತ್ತು ಠಾಣಾ ಬರಹಗಾರ ಎ2 ಮಂಜುನಾಥ್ ಪಿಸಿ ಅಂಬರೀಷ್ ಗೆ ಹಣ ಪಡೆಯುವಂತೆ ಸೂಚಿಸಿದ್ದಾರೆ..
PSI ಜಗದೇವಿ,ಪಿಸಿ ಮಂಜುನಾಥ್ ಮಾತುಕತೆಯಂತೆ ಸಂತ್ರಸ್ತೆ ಕಡೆಯವರ ಬಳಿ ಮುಂಗಡವಾಗಿ 50 ಸಾವಿರ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಪಿಸಿ ಅಂಬರೀಷ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.. ಇನ್ನು ಲೋಕಾಯುಕ್ತ ರೇಡ್ ಆಗ್ತಿದ್ದಂತೆ ಎ1 ಜಗದೇವಿ ಮತ್ತು ಎ2 ಮಂಜುನಾಥ್ ಎಸ್ಕೇಪ್ ಆಗಿದ್ದಾರೆ.. ಲೋಕಾಯುಕ್ತ ಎಸ್ ಪಿ ಕೆ.ವಂಶಿಕೃಷ್ಣ , ಡಿವೈಎಸ್ಪಿ ನಾಗೇಶ್ ಹಸ್ಲರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಸ್ಕೇಪ್ ಆದ ಪಿಎಸ್‌ಐ ಜಗದೇವಿ, ಮಂಜುನಾಥ್ ಗಾಗಿ ಶೋಧ ನಡೆಯುತ್ತಿದೆ. ಪಿಸಿ ಅಂಬರೀಶ್‌ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ..