Friday, September 12, 2025
21 C
Bengaluru
Google search engine
LIVE
ಮನೆ#Exclusive NewsTop Newsನವೆಂಬರ್​​ನಲ್ಲಿ ‘ಭೈರತಿ ರಣಗಲ್’ ಸಿನಿಮಾ ರಿಲೀಸ್​​ನಿಂದ ‘ಕಂಗುವ’ ಚಿತ್ರಕ್ಕೆ ದೊಡ್ಡ ನಷ್ಟ; ಸಿಗುತ್ತಿಲ್ಲ ಥಿಯೇಟರ್

ನವೆಂಬರ್​​ನಲ್ಲಿ ‘ಭೈರತಿ ರಣಗಲ್’ ಸಿನಿಮಾ ರಿಲೀಸ್​​ನಿಂದ ‘ಕಂಗುವ’ ಚಿತ್ರಕ್ಕೆ ದೊಡ್ಡ ನಷ್ಟ; ಸಿಗುತ್ತಿಲ್ಲ ಥಿಯೇಟರ್

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಟ ಸೂರ್ಯ ಅಭಿಯನತದ ತಮಿಳಿನ ‘ಕಂಗುವ’ ಸಿನಿಮಾ ಅಕ್ಟೋಬರ್ 10ರಂದೇ ರಿಲೀಸ್ ಆಗಬೇಕಿತ್ತು. ಆದರೆ, ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಕಾರಣಕ್ಕೆ ಸಿನಿಮಾ ರಿಲೀಸ್​ನ ನವೆಂಬರ್ 14ಕ್ಕೆ ಮುಂದೂಡಿಕೊಳ್ಳಲಾಗಿತ್ತು. ಈಗ ಇದು ಕೂಡ ತಂಡಕ್ಕೆ ದುಬಾರಿ ಆಗುವ ಸೂಚನೆ ಕಾಣೂತಿದೆ. ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕದಲ್ಲೂ ಸಹ ಈ ಚಿತ್ರಕ್ಕೆ ಥಿಯೇಟರ್​ಗಳು ಸಿಗೋದು ಬಹು ಕಷ್ಟ ಆಗುತ್ತಿದೆ.

ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಮೇಲಿನ ಭಯದಿಂದ ‘ಕಂಗುವ’ ರಿಲೀಸ್ ದಿನಾಂಕ ಮುಂದಕ್ಕೆ ಚಿತ್ರತಂಡ ಹಾಕಿಕೊಳ್ಳಲಾಗಿತ್ತು. ಆದರೆ, ‘ವೆಟ್ಟೈಯಾನ್’ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಪಡೆಯಲಿಲ್ಲ. ಆದರೆ, ಇತ್ತೀಚೆಗೆ ರಿಲೀಸ್ ಆದ ತಮಿಳಿನ ‘ಅಮರನ್’ ಸಿನಿಮಾ ಭರ್ಜರಿ ಸಕ್ಸಸ್ ಕಾಣುತ್ತಿದೆ. ಇದರಿಂದ ‘ಕಂಗುವ’ ಚಿತ್ರಕ್ಕೆ ಥಿಯೇಟರ್ ಸಿಗೋದು ಕಷ್ಟ ಆಗುತ್ತಿದೆ ಎಂದು ಮೂಲಗಳಿಂದ ತಿಳಿದಿದೆ.

ಶಿವಕಾರ್ತಿಕೇಯ ಹಾಗೂ ಸಾಯಿ ಪಲ್ಲವಿ ಒಟ್ಟಾಗಿ ನಟಿಸಿರುವ ‘ಅಮರನ್’ ಸಿನಿಮಾ ಈಗಾಗಲೇ ತಮಿಳಿನಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿದೆ. ಹೀಗಾಗಿ, ಈ ಚಿತ್ರವನ್ನು ಥಿಯೇಟರ್​ನಿಂದ ತೆಗೆಯಲು ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನಲ್ಲಿ ‘ಕಂಗುವ’ ಚಿತ್ರಕ್ಕೆ ಸಿಗೋದು ಕೇವಲ ಶೇ.50 ಥಿಯೇಟರ್​ಗಳು ಮಾತ್ರ. ಕೆಲವು ಕಡೆಗಳಲ್ಲಿ ‘ಕಂಗುವ’ ಚಿತ್ರಕ್ಕೆ ಎರಡು ಶೋ ಹಾಗೂ ‘ಅಮರನ್’ ಚಿತ್ರಕ್ಕೆ ಎರಡು ಶೋ ನೀಡಲಾಗುತ್ತಿದೆ.

ಇತ್ತ ಕರ್ನಾಟಕದಲ್ಲೂ ‘ಕಂಗುವ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನವೆಂಬರ್ 15ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಹೀಗಾಗಿ, ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ.

ಶಿವ ಅವರು ‘ಕಂಗುವ’ ಚಿತ್ರ ನಿರ್ದೇಶನ ಮಾಡಿದ್ದಾರೆ. ಸೂರ್ಯ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೆ, ಬಾಬಿ ಡಿಯೋಲ್, ದಿಶಾ ಪಟಾಣಿ, ಯೋಗಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿ ಇದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆದಿದೆ. ಸ್ಟುಡಿಯೋ ಗ್ರೀನ್ ಹಾಗೂ ಯುವಿ ಕ್ರಿಯೇಷನ್ ಇದನ್ನು ನಿರ್ಮಾಣ ಮಾಡಿದೆ. ಬಾಬಿ ಡಿಯೋಲ್ ಅವರು ಪವರ್​ಫುಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments