ನವದೆಹಲಿ: ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಭೂಮಿಗೆ ವಾಪಾಸಾಗಿದ್ದಾರೆ.
ಇಂದು ಮುಂಜಾನೆ 3 ಗಂಟೆಗೆ ಅವರು ಯಶಸ್ವಿಯಾಗಿ ಬಂದಿಳಿದಿದ್ದಾರೆ. ಅವರ ಬಾಹ್ಯಾಕಾಶ ಅಧ್ಯಯನ ಮತ್ತು ಪ್ರಯೋಗಾತ್ಮಕ ಕಾರ್ಯಗಳು ಭವಿಷ್ಯದ ಅನೇಕ ವಿಜ್ಞಾನಾ ಮತ್ತು ತಂತ್ರಜ್ಞಾನ ಅಭಿವೃದ್ಧಿಗಳಿಗೆ ಪೂರಕವಾಗುವ ನಿರೀಕ್ಷೆಯಿದೆ. ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸಂಶೋಧನ ನಿಮಿತ್ತ 1 ವಾರದ ಬಾಹ್ಯಕಾಶ ಯಾನ ಕೈಗೊಂಡು ತಾಂತ್ರಿಕ ವೈಫಲ್ಯದಿಂದ ಭೂಮಿಗೆ ಮರಳಲಾಗದೆ ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಸಿಲುಕಿದ್ದರು. ಇದೀಗ ಸ್ಪೇಸ್ ಎಕ್ಸ್, ನಾಸಾ ಸಂಸ್ಥೆಗಳು ಸುನಿತಾ ಮತ್ತು ತಂಡ ಭೂಮಿಗೆ ಬರಲು ಸಹರಿಸಿವೆ.
ಸುನಿತಾ ವಿಲಿಯಮ್ಸ್ ಮ್ತತು ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕೊಟ್ಯಂತರ ಜನ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.