Thursday, November 20, 2025
19.5 C
Bengaluru
Google search engine
LIVE
ಮನೆಜಿಲ್ಲೆರಾಜ್ಯದಲ್ಲಿ ಬೇಸಿಗೆ ಶುರುವಾಗಿದೆ : ಎಲ್ಲೆಲ್ಲೂ ಬಿಸಿಲ ಝಳಕ್ಕೆ ಜನ ತತ್ತರಿಸುತ್ತಿದ್ದಾರೆ

ರಾಜ್ಯದಲ್ಲಿ ಬೇಸಿಗೆ ಶುರುವಾಗಿದೆ : ಎಲ್ಲೆಲ್ಲೂ ಬಿಸಿಲ ಝಳಕ್ಕೆ ಜನ ತತ್ತರಿಸುತ್ತಿದ್ದಾರೆ

ರಾಜ್ಯದಲ್ಲಿ ಬೇಸಿಗೆ ಶುರುವಾಗಿದೆ.ಎಲ್ಲೆಲ್ಲೂ ಬಿಸಿಲ ಝಳಕ್ಕೆ ಜನ ತತ್ತರಿಸುತ್ತಿದ್ದಾರೆ.ಈ ನಡುವೆ ಬೆಂಗಳೂರಿನ ಸೇರಿದಂತೆ ಹಲವೆಡೆ ನೀರಿನ ಬೇಡಿಕೆ ಹೆಚ್ಚಿದೆ.ನೀರಿನ ಬೇಡಿಕೆ ನಡುವೆ ಬೆಂಗಳೂರು ಜಲಮಂಡಳಿ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿದೆ.ಹೀಗಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 28ರ ಬೆಳಗ್ಗೆ 6 ಗಂಟೆ ತನಕ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನಾಳೆ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 28ರ ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ತುರ್ತು ಕಾಮಗಾರಿ ಹಾಗೂ ಯುಎಫ್ ಡಬ್ಲ್ಯೂ ಬಲ್ಕ್ ಫ್ಲೋ ಮೀಟರ್ ಅಳವಡಿಕೆ ಹಿನ್ನೆಲೆಯಲ್ಲಿ ನಗರದ ಅನೇಕ ಭಾಗಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.ಬೆಂಗಳೂರು ನಗರದಲ್ಲಿ ಎಲ್ಲೆಲ್ಲಿ ನೀರು ಪೂರೈಕೆ ಸ್ಥಗಿತ?

4ನೇ ಬ್ಲಾಕ್ ನಂದಿನಿ ಲೇಔಟ್‌, ಬಿಎಚ್‌ಇಎಲ್‌, ಮಲ್ಲತ್ತಹಳ್ಳಿ, ಸುಂಕದಕಟ್ಟೆ, ನಂದಿನಿ ಲೇಔಟ್‌, ಸೊನ್ನೇನಹಳ್ಳಿ, ಕೊಟ್ಟಿಗೆಪಾಳ್ಯ, ದಾಸರಹಳ್ಳಿ, ಜಾಲಹಳ್ಳಿ, ಲಗ್ಗೆರೆ, ನಾಗದೇವನಹಳ್ಳಿ, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಕೆಂಗೇರಿ ಉಪನಗರ, ಪಟ್ಟಣಗೆರೆ, ಜ್ಞಾನಭಾರತಿ, ಮರಿಯಪ್ಪನ ಪಾಳ್ಯ, ಉಲ್ಲಾಳ, ನಾಯಂಡಹಳ್ಳಿ, ಮೈಲಸಂದ್ರ, ನಾಗರಬಾವಿ, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆ ನಗರ, ಶಿವಾನಂದನಗರ, ಸರಸ್ವತಿನಗರ, ಅನುಭವನಗರ, ಕೆನರಾ ಬ್ಯಾಂಕ್‌ ಕಾಲೋನಿ, ಮೂಡಲಪಾಳ್ಯ, ಮಧುರನಗರ, ಕನಕನಗರ, ಯೂನಿವರ್ಸಿಟಿ ಲೇಔಟ್‌, ಹೆಗ್ಗನಹಳ್ಳಿ, ಬ್ಯಾಟರಾಯನಪುರದಲ್ಲಿ ನೀರು ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಇನ್ನು, ಗೋವಿಂದರಾಜನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಯಲಹಂಕ ಓಲ್ಡ್‌ ಟೌನ್‌, ಅಮೃತಹಳ್ಳಿ, ರಾಮಚಂದ್ರಾಪುರ, ವಿದ್ಯಾರಣ್ಯಪುರ, ಕೆಂಪಾಪುರ, ಹುಳಿಮಾವು, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಬೈರಸಂದ್ರ, ಬಾಣಸವಾಡಿ, ಚಿಕ್ಕ ಬಾಣಸವಾಡಿ, ತಿಗಳರಪಾಳ್ಯ, ಜೆಪಿ ನಗರ 9ನೇ ಹಂತ, ಜಂಬೂನಗರ, ಶಾಂತಿನಗರ, ಜಂಬೂಸವಾರಿ ದಿಣ್ಣೆ, ಸರಸ್ವತಿಪುರ, ಜಿಕೆವಿಕೆ ಲೇಔಟ್‌, ಯಶವಂತಪುರ (ಪಾರ್ಟ್‌), ಈಜಿಪುರ, ಬೈಯಪ್ಪನಹಳ್ಳಿ, ಸುಧಾಮನಗರ, ಮಾರತ್ತಹಳ್ಳಿ, ಎನ್‌.ಆರ್‌. ಕಾಲೋನಿ, ಚಿಕ್ಕ ಬಾಣಸವಾಡಿ, ಬೊಮ್ಮನಹಳ್ಳಿ, ತಿಗಳರಪಾಳ್ಯ, ಬೇಗೂರು, ಚಿಕ್ಕಬೇಗೂರು, ಕೊತ್ತನೂರು ದಿಣ್ಣೆ, ಕೆಎಚ್‌ಬಿ ಕಾಲೋನಿ, ನಾಗವಾರಪಾಳ್ಯ, ತಿಪ್ಪಸಂದ್ರದಲ್ಲೂ ನೀರು ಪೂರೈಕೆ ನಿಲ್ಲಲಿದೆ.

ನಗರದ ಹಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದ್ದು, ಒಂದು ದಿನದ ಮಟ್ಟಿಗೆ ಸಾರ್ವಜನಿಕರು ಹಾಗೂ ಜಲಮಂಡಳಿ ಗ್ರಾಹಕರು ನೀರಿಗೆ ಬದಲಿ ವ್ಯವಸ್ಥೆ ಅಥವಾ ಮುಂಚಿತವಾಗಿ ನೀರು ಸಂಗ್ರಹ ಮಾಡಿಕೊಳ್ಳಬೇಕೆಂದು ಜಲಮಂಡಳಿ ತಿಳಿಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments