#Exclusive NewsTop Newsಮನರಂಜನೆಸಿನಿಮಾಸುದ್ದಿ

ಮ್ಯಾಕ್ಸ್ ನೋಡಲು ಬಂದ ಸುದೀಪ್​ ಕುಟುಂಬ…!

ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ತೆರೆ ಮೇಲೆ ಕಿಚ್ಚನ ಕಣ್ತುಂಬಿಕೊಂಡು ಫ್ಯಾನ್ಸ್ ಖುಷ್ ಆಗಿದ್ದಾರೆ. ಇನ್ನು ಮ್ಯಾಕ್ಸ್​ ಸಿನಿಮಾ ಟಿಕೆಟ್ ಕೂಡ ಭಾರೀ ಸಂಖ್ಯೆಯಲ್ಲಿ ಸೋಲ್ಡ್ ಆಗಿದೆ. ಕ್ರಿಸ್​ಮಸ್​ ಹಬ್ಬದ ಸಡಗರದಲ್ಲಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್​  ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದೆ. ಇಂದು ಬೆಳಗ್ಗೆ 7 ಗಂಟೆಗೆ ರಾಜ್ಯದ 250ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ. ಆ ಮೂಲಕ ಕ್ರಿಸ್​ಮಸ್​ ಹಬ್ಬದ ಜೊತೆಗೆ ಸುದೀಪ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಸಿಕ್ಕಿದೆ.

ಪೊಲೀಸ್ ಅಧಿಕಾರಿಯಾಗಿ ಕಿಚ್ಚ ;

ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.  ಇತ್ತ ಮ್ಯಾಕ್ಸ್ ಸಿನಿಮಾ​ ನೋಡೋದಕ್ಕೆ ನರ್ತಕಿ ಥಿಯೇಟರ್​ಗೆ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಆಗಮಿಸಿದ್ದಾರೆ.

Comments (0)

Your email address will not be published. Required fields are marked *

Back to top button