
ಯಶ್ ಹಾಗೂ ಸುದೀಪ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಇಬ್ಬರಿಗೂ ಪರಭಾಷೆಯಲ್ಲಿ ಬೇಡಿಕೆ ಇದೆ. ಆದಾಗ್ಯೂ ಕನ್ನಡ ಸಿನಿಮಾಗಳನ್ನು ಬೆಳೆಸುವ ಕೆಲಸ ಇವರಿಂದ ಆಗುತ್ತಿದೆ. ಇವರು ಮುಖಾಮುಖಿ ಆಗಿದ್ದು ತುಂಬಾನೇ ಕಡಿಮೆ. ಈಗ ಅಂಥದ್ದೊಂದು ಅಪರೂಪದ ಘಟನೆಗೆ ಸ್ಯಾಂಡಲ್ವುಡ್ ಸಾಕ್ಷಿ ಆಯಿತು. ಇಬ್ಬರೂ ಪರಸ್ಪರ ತಬ್ಬಿಕೊಂಡು ಶುಭಾಶಯ ಹೇಳಿಕೊಂಡರು.
ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಸದ್ಯ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಸೋಮವಾರ (ಡಿಸೆಂಬರ್ 24) ಚಿತ್ರದ ಸೆಲೆಬ್ರಿಟಿ ಶೋ ಬೆಂಗಳೂರಿನ ಒರಾಯನ್ ಮಾಲ್ನ ಪಿವಿಆರ್ನಲ್ಲಿ ನಡೆದಿದೆ. ಹಾಗಂತ ಇದು ಸಾಮಾನ್ಯ ಸೆಲೆಬ್ರಿಟಿ ಶೋ ಆಗಿರಲಿಲ್ಲ. ಇಲ್ಲಿ ಬಂದವರೆಲ್ಲರೂ ದಿಗ್ಗಜರೇ ಆಗಿದ್ದರು. ಯಶ್, ಸುದೀಪ್ ಸೇರಿದಂತೆ ಅನೇಕರು ಸಿನಿಮಾ ವೀಕ್ಷಿಸಿದ್ದಾರೆ.
ಈ ಸೆಲೆಬ್ರಿಟಿ ಶೋ ವೇಳೆ ಸುದೀಪ್ ಹಾಗೂ ಯಶ್ ಪರಸ್ಪರ ತಬ್ಬಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.




