ಮನರಂಜನೆ

ಡ್ರೋನ್ ಪ್ರತಾಪ್ ಗೆ ಇದೆಂಥಾ ಪರೀಕ್ಷೆ

ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ವಿರುದ್ಧ ದಿನಕ್ಕೊಂದು ಆರೋಪ ಕೇಳಿ ಬರುತ್ತಿದೆ , ಈ ಹಿಂದೆ ಮಾನನಷ್ಟ ಮೊಕ್ಕದ್ದಮೆ ದಾಖಲಿಸಿದ್ದ ಡಾಕ್ಟರ್ ಪ್ರಯಾಗ್ ರವರ ದೂರನ್ನ ಆಧರಿಸಿ ಫೆಬ್ರವರಿ ೨೦ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಇಂದು ಕೋರ್ಟ್ ನೋಟಿಸ್ ಕೂಡ ಡ್ರೋನ್ ಪ್ರತಾಪ್ ನಿದ್ದೆಗೆಡಿಸಿದೆ ,ಅದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಸರು ಹೇಳಿಕೊಂಡು ಜಿಲ್ಲಾಪಂಚಾಯಿತಿ ಟಿಕೆಟ್ ಕೊಡಿಸುತ್ತೇನೆ ಎಂದು ಡ್ರೋನ್ ಪ್ರತಾಪ್ ಮಾಜಿ ಸ್ನೇಹಿತ ಚಂದನ್ ಗೌಡರ ಬಳಿ ಎರಡು ಲಕ್ಷ ಹಣ ಪಡೆದ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಾಪ್ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸಲು ಚಂದನ್ ಗೌಡ ತೀರ್ಮಾನಿಸಿದ್ದು ,ಡ್ರೋನಾರ್ಕ್ ಕಂಪೆನಿಯು ಕಾನೂನು ಬಾಹಿರವಾಗಿ ನಡೆಯುತ್ತಿದೆ .

ಡ್ರೋನ್ ಪ್ರತಾಪ್ ತನ್ನ ಬಳಿ ಲ್ಯಾಮ್ಬೋರ್ಗಿನಿ ಕಾರಿದೆ ಮತ್ತು ಈಗಾಗಲೇ ೨೬ ಲಕ್ಷದ ಡ್ರೋನನ್ನು ಮಾರಾಟ ಮಾಡಿಕೊಂಡಿರುವುದಾಗಿಯು ನನ್ನ ಬಳಿ ಸುಳ್ಳು ಹೇಳಿ ನಂಬಿಸಿ ನನ್ನನ್ನ ವಿಶ್ವಾಸಕ್ಕೆ ಪಡೆದುಕೊಂಡಿದ್ದ ಎಂದು ಡ್ರೋನ್ ಪ್ರತಾಪ್ ಮಾಜಿ ಸ್ನೇಹಿತ ಚಂದನ್ ಗೌಡ ಆರೋಪಿಸಿದ್ದಾರೆ. ಇನ್ನು ಪ್ರತಾಪ್ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ. ಆದರೆ ದೂರಿನ ಸಂಬಂಧ ಯಾವುದೇ ಎಫ್‌ಐಆರ್ ಅಥವಾ ಹೇಳಿಕೆಯನ್ನ ಪೊಲೀಸರು ದಾಖಲಿಸಿಲ್ಲ ಎಂಬುದು ಕೂಡ ಬೆಳಕಿಗೆ ಬಂದಿದೆ.

ಯಾವುದು ಆ ದೂರುಗಳು?

ದಾಖಲಾಗಿರುವ ದೂರುಗಳ ಪ್ರಕರಣದಲ್ಲಿ ಪ್ರತಾಪ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣ ಸಂಬಂಧ ಯಾವುದೇ ನೋಟಿಸ್ ಸಹ ಕೊಟ್ಟಿಲ್ಲ, ಒಮ್ಮೆಯೂ ಕೂಡ ಪ್ರತಾಪ್ ಹೇಳಿಕೆಯನ್ನ ದಾಖಲಿಸಿಲ್ಲ. ಈ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗಳು ಹಲವು ಅನುಮಾನಗಳಿಗೆ ಕೂಡ ಕಾರಣವಾಗಿದೆ. ಪ್ರತಾಪ್‌ ವಿರುದ್ಧ ಬಿಬಿಎಂಪಿ ಅಧಿಕಾರಿ ಪ್ರಯಾಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟ್‌ನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು.

ಲೈಸೆನ್ಸ್‌ ಪಡೆಯದೇ ಡ್ರೋನ್‌ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನ ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್‌ ಪ್ರತಾಪ್‌ ವಂಚಿಸುತ್ತಿದ್ದಾರೆ ಎಂದು ಬನಶಂಕರಿಯ ಪರಮೇಶ್ವರ್‌ ಎಂಬುವವರು ಡ್ರೋನ್‌ ಪ್ರತಾಪ್‌ ವಿರುದ್ಧ ದೂರು ದಾಖಲಿಸಿದರು. ಮಂಡ್ಯ ಮೂಲದ ಚಂದನ್ ಕುಮಾರ್ ಗೌಡ ಜೆಡಿಎಸ್‌ಯಿಂದ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡದ್ದರು,ಆದ್ರೆ ಈ ಎಲ್ಲ ದಾಖಲಾಗಿರುವ ದೂರುಗಳ ಪ್ರಕರಣದಲ್ಲಿ ಪ್ರತಾಪ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಅನ್ನೋದು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿದೆ ,ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button