ಜಿಲ್ಲೆ

ಮೂಲಭೂತ ಸೌಕರ್ಯ ನೀಡದಿದ್ದಲ್ಲಿ ಮಾ.4 ರಂದು ಹೋರಾಟ-ಬಿ.ಎ.ಪಾಟೀಲ್.

ಹುಬ್ಬಳ್ಳಿ; ಹಿರಿಯ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕೆಂದು ಆಗ್ರಹಿಸಿ, ಮಾರ್ಚ್ ೪ ರಂದು ಹಿರಿಯ ನಾಗರಿಕರ ರಾಜ್ಯಾದ್ಯಂತ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ನಿವೃತ ಸರ್ಕಾರಿ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಬಿ.ಎ.ಪಾಟೀಲ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂವಿಧಾನ ಸೂಚನಾ ಆಧಾರವಾಗಿ ರಾಷ್ಟ್ರದ ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ, ಆರೋಗ್ಯ, ರಕ್ಷಣೆ ಸೇರಿದಂತೆ ಮೂಲಕ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ‌.

ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ವೃದ್ದಾಪಿವೇತನ ಕೇವಲ ಹತ್ತು ಪ್ರತಿಶತ ಹಿರಿಯರಿಗೆ ಮಾತ್ರ ವಿತರಿಸಲಾಗಿತ್ತಿದೆ‌. ಈಚೇಗೆ ತಾಂತ್ರಿಕ ಕಾರಣ ನೀಡಿ, ರಾಜ್ಯದ ವೃದ್ಧಾಪಿ ವೇತನ ಪಡೆಯುತ್ತಿದ್ದ ಅರ್ಧದಷ್ಟು ಹಿರಿಯರಿಗೆ ಸಿಗುತ್ತಿಲ್ಲ‌. ಈ ರೀತಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸುತ್ತಿರುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಶೇ. ೧೫ ರಷ್ಟು ಮತ ಹೊಂದಿದ ಎಲ್ಲಾ ಹಿರಿಯರನ್ನು ಸಂಘಟಿಸಿ ಹಂತಹಂತವಾಗಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಹಶಿಲ್ದಾರ ಹಾಗೂ ಜಿಲ್ಲಾಧಿಕಾರಿ ಕಛೇರಿ ಮುಂದೆ ಹಿರಿಯ ನಾಗರಿಕರ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಹಕ್ಕೋತ್ತಾಯ ಮಾಡಿದರು. ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ನೋಟಾ ವೋಟ ಮತದಾನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Comments (0)

Your email address will not be published. Required fields are marked *

Back to top button