ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನ ವಿಚಾರದಲ್ಲಿ ಕೇಂದ್ರ ರಾಜ್ಯ ಸರ್ಕಾರದ ಕಡೆ ಬೊಟ್ಟು ಮಾಡುವವರಿಗೆ ಇಲ್ಲ , ರಾಜ್ಯ ಸರ್ಕಾರಕ್ಕೆ ಬಜೆಟ್ ಹ್ಯಾಂಡಲ್ ಮಾಡೋದು ಗೊತ್ತಿಲ್ಲ . ಹುಬ್ಬಳ್ಳಿಯಲ್ಲಿ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಕಿಡಿ ಉದಾಹರಣೆಯೊಂದಿಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜಗ್ಗೇಶ್ , ಮನೆಯ ಹಿರಿಯನಿಗೆ ಸಂಬಳ ಬಂದಾಗ ರೇಷನ್, ಎಲೆಕ್ಟ್ರಿಕ್ ಬಿಲ್, ಮಕ್ಕಳ ಫೀಸ್ ಅಂತಾ ಪ್ಲ್ಯಾನಿಂಗ್ ಮಾಡ್ತಾರೆ, ಅದಕ್ಕೆ ಅದು ಮನೆಯ ಬಜೆಟ್ ಅಂತಾರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕಾಗಿತ್ತು, ಮಾಡಲಿಲ್ಲ ನಮ್ಮಗೆ ಸಿಗುವ ಅನುದಾನದಲ್ಲಿ ಅಭಿವೃದ್ಧಿಗೆ ಇಷ್ಟು, ಸಂಬಳಕ್ಕೆ ಇಷ್ಟು ಇಂತಾ ಪ್ಲ್ಯಾನ್ ಮಾಡಬಹುದಿತ್ತು ಮಾಡಲಿಲ್ಲ.
ಅರೋ ಅರ್ಜಿಂಟಿನಲ್ಲಿ ಫ್ರೀ ಮಿಲ್ಸ್ ಸೇರಿ ಎದ್ವಾ ತದ್ವಾ ಭರವಸೆ ನೀಡಿದರು. ಈಗ ಆ ಭರವಸೆ ಕೇವಲ ನಾಲ್ಕು ತಿಂಗಳ ಮಾತ್ರ ಈಡೇರಿಸೊಕ್ಕೆ ಆಗುತ್ತೆ ಭರವಸೆ ಗ್ಯಾರಂಟಿಗಳಿಗೆ ದುಡ್ಡು ಸಾಕಾಗುವುದಿಲ್ಲ ಕೊಟ್ಟ ಭರವಸೆ ಈಡೇರಿಸಲಾಗದೆ. ಅಪಮಾನ ಆಗುವುದರಿಂದ ತಪ್ಪಿಸಿಕೊಳ್ಳಲು ಕೇಂದ್ರ ಕಡೆ ಬೊಟ್ಟು ಮಾಡುತ್ತಾರೆ ಪ್ರಧಾನಿ ಮೋದಿಯವರು ಮಾತಾಡುವುದಿಲ್ಲ ಕೆಲಸ ಮಾಡಿ ತೋರಿಸುತ್ತಾರೆ ಅದೂ ನೀವು ಸೈನಿಕರ ವಿಚಾರದಲ್ಲಿ ಗಮನಿಸಿರಬಹುದು ಯಾವುದೇ ದೇಶದ ಸಹಾಯವಿಲ್ಲದೆ ವಿದೇಶದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸೈನಿಕರನ್ನು ತಾಯ್ನಾಡಿಗೆ ಕರೆದುಕೊಂಡು ಬಂದಿದ್ದಾರೆ .
ವಿಪಕ್ಷ ನಾಯಕರು ನಿರುದ್ಯೋಗ ಬಗ್ಗೆ ಮಾತಾಡುತ್ತಾರೆ ಸ್ಟಾರ್ಟಪ್ ಅಡಿಯಲ್ಲಿ ಸುಮಾರು ಕಂಪನಿಗಳು ದೇಶವ್ಯಾಪಿ ಈಗ ಕಾರ್ಯಾರಂಭ ಮಾಡಿವೆ, ಅದರಲ್ಲಿ ಎಷ್ಟೋ ಯುವಕರಿಗೆ ಉದ್ಯೋಗ ದೊರಕಿವೆ ಈ ಎಲ್ಲ ವಿಚಾರವನ್ನು ಹೌಸ್ನಲ್ಲಿ ಏಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಗ ಯಾರೊಬ್ಬರು ಎದ್ದು ನಿಂತು ಪ್ರಶ್ನೆ ಮಾಡಲಿಲ್ಲ ಕಾರಣ ಅವರಿಗೂ ಗೊತ್ತು ನಾವು ತಪ್ಪು ಮಾಡುತ್ತಿದ್ದೇವೆ ಅನ್ನುವುದು, ಹಾಗಾಗಿ ವಿಷಯವೇ ಇಲ್ಲದೆ ಹೌಸ್ನಲ್ಲಿ ಎಲ್ಲರೂ ಸುಮ್ಮನಿದ್ದರು. ನಿರ್ಮಲಾ ಸೀತರಾಮನ್ ಅವರನ್ನು ಅರ್ಥ ತಜ್ಞೆ ಅಂದರು.
ಯಾವ ಯಾವ ರಾಜ್ಯಕ್ಕೆ ಏನೇನೂ ಕೊಡಬೇಕು ಅದನ್ನು ಯಾವುದೇ ಡೀಲೆ ಮಾಡದೆ ಅನುದಾನ ನೀಡಿದ್ದಾರೆ. ನಾವೆಲ್ಲರೂ ಹೆಮ್ಮೆ ಪಡುವ ಹಾಗೇ ಪ್ರಧಾನಿ ಮೋದಿಯವರು ಆಡಳಿತ ನೀಡಿದ್ದಾರೆ . ಯಾವುದೇ ಒಂದೇ ಒಂದು ಸ್ಕ್ಯಾಮ್ ಇಲ್ಲದೆ ಆಡಳಿತ ನೀಡಿದ್ದಾರೆ. ಉತ್ತಮ ಆಡಳಿತ ನೀಡುವುದರ ಜೊತೆಗೆ ಆರ್ಥಕವಾಗಿ ದೇಶವನ್ನು ಬಲಪಡಿಸುತ್ತಿದ್ದಾರೆ . ಇದಕ್ಕೆ ಇಂದು ದೇಶ ಜಗತ್ತಿನಲ್ಲಿ ಅರ್ಥಿಕವಾಗಿ ಐದನೆ ಸ್ಥಾನದಲ್ಲಿರುವುದು ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರೋ ಮುಂಚೆ ಹತ್ತೂ (10 ) ಕೆಜಿ ಅಕ್ಕಿ ಅಂದ್ರೂ , ಈಗ ಯಾಕೆ ಇವರಿಗೆ ಅದನ್ನು ಕೊಡುವುದಕ್ಕೆ ಆಗಲಿಲ್ಲ..? ಈಗಲೂ ಪ್ರಧಾನಿಗಳು ದೇಶವ್ಯಾಪಿ ಉಚಿತ ಪಡಿತರ ಅಕ್ಕಿ ನೀಡುತ್ತಿದ್ದಾರೆ. ಮತ್ತೆ ಅದನ್ನು ಈಗ ಐದು ವರ್ಷ ಮುಂದುವರೆಸಿದ್ದಾರೆ . ಇಂಧೀರಾ ಗಾಂಧಿಯವರು ಕೆಂಪ್ಪು ಜೋಳಾ ಕೊಟ್ರೂ , ಅಂತಾ ಐವತ್ತು ವರ್ಷದಿಂದ ಅದನ್ನೇ ಹೇಳುತ್ತಾ ಬಂದಿದ್ದಾರೆ ಮೋದಿಯವರು ಅದ್ಭುತ ರಸ್ತೆ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೈಗೊಂಡಿದ್ದಾರೆ.
ಸುಳ್ಳು ಅಪಾರದನೆಯ ಮೂಲಕ ಜನಗಳನ್ನ ನಂಬಿಸೊಕ್ಕೆ ವಿರೋಧಿಗಳು ಯತ್ನಿಸುತ್ತಿದ್ದಾರೆ . ರಾಜ್ಯ ಸರ್ಕಾರ ತನ್ನ ಬರುವ ಆದಾಯದಲ್ಲಿ ರಾಜ್ಯ ನಡೆಸಬೇಕಾಗುತ್ತು . ಇಂದು ಸಾರಿಗೆ ಬಸ್ ಫ್ರೀ ಮಾಡಿದ್ದಾರೆ, ಅದರನ್ನು ಲಿಮಿಟೆಡ್ ಮಾಡಬಹುದಿತ್ತು. ವಯಸ್ಸಾದವರಿಗೆ, ಓದುವ ಮಕ್ಕಳಿಗೆ ಬಸ್ಸು ಪ್ರೀ ಮಾಡಬಹುದಿತ್ತು . ಆದರೆ ಇಂದು ಓದೋ ಮಕ್ಕಳು ಬಸ್ಸಿಗೆ ನಡು ರಸ್ತೆಯಲ್ಲಿ ನಿಲ್ಲೋ ಹಾಗೇ ಆಗಿದೆ ಬಿಟ್ಟಿದೆ. ಶೋಕಿ ಮಾಡುವವರೆಲ್ಲರೂ ಬಸ್ಸಿನಲ್ಲಿ ಓಡಾಡುವ ಹಾಗೇ ಆಗಿದೆ.