ಮಂಗಳೂರು: ಮಸೀದಿಗೆ ಪ್ರಾರ್ಥನೆಗೆ ಬರುವ ವ್ಯಕ್ತಿಯ ಬಳಿ ಡ್ಯಾಗರ್ ಇರಲು ಹೇಗೆ ಸಾಧ್ಯ? ಒಂದು ವೇಳೆ ಆತನಲ್ಲಿ ಅದು ಇದ್ದಲ್ಲಿ ಖಂಡಿತವಾಗಿಯೂ ಅದರ ತರಬೇತಿ ಆತನಿಗೆ ಇರುತ್ತದೆ ಎಂದು ಅಶೋಕ ಸವಾಲು ಹಾಕಿದ್ದಾರೆ.
ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದಿರುವ ಅವರು ಇದು ತಾಲಿಬಾನ್ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ತಾಲಿಬಾನ್ ಆಡಳಿತ ಇರುವ ರಾಜ್ಯವಾಗಿ ಪರಿವರ್ತಿತವಾಗುತ್ತಿದೆ. ಇಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದವರಿಗೂ ಜಾಮೀನು ಸಿಗುತ್ತದೆ. ಬೋಳಿಯಾರಿನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದನ್ನು ಸಹಿಸಿಕೊಂಡು ಮೌನವಾಗಿರಲು ಸಾಧ್ಯವೇ ಇಲ್ಲ. ಸದನದಲ್ಲಿ ಇದನ್ನು ನಾವು ಪ್ರಶ್ನಿಸುತ್ತೇವೆ. ತಾಲಿಬಾನ್ ಮಾದರಿಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಖಂಡಿತವಾಗಿಯೂ ಪಾಠ ಕಲಿಸಲಿದೆ.


