Monday, June 23, 2025
25.9 C
Bengaluru
Google search engine
LIVE
ಮನೆಕ್ರಿಕೆಟ್ಸ್ಟಾರ್​ ಕ್ರಿಕೆಟರ್ ಗೆ ಹೃದಯಾಘಾತ​​

ಸ್ಟಾರ್​ ಕ್ರಿಕೆಟರ್ ಗೆ ಹೃದಯಾಘಾತ​​

ಕ್ರಿಕೆಟ್​​ ರೆ ಲಘು ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಢಾಕಾ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಹೃದಯಾಘಾತಕ್ಕೀಡಾಗಿದ್ದು, ಅವರನ್ನು ಢಾಕಾದ ಹೊರ ವಲಯದಲ್ಲಿರುವ ಸವರ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸವಾರ್‌ನಲ್ಲಿ ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಶಿನೆಪುಕುರ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ ಆಡುತ್ತಿದ್ದಾಗ ತಮೀಮ್ ಹೃದಯಾಘಾತಕ್ಕೆ ಒಳಗಾಗಿದ್ದರು.

ಪ್ರಾರಂಭದಲ್ಲಿ ತಮೀಮ್‌ಗೆ ಮೈದಾನದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅವರನ್ನು ಢಾಕಾದ ಉನ್ನತ ಆಸ್ಪತ್ರೆಗೆ ಕೊಂಡೊಯ್ಯಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬಿಕೆಎಸ್‌ಪಿ ಮೈದಾನದಿಂದ ಹೆಲಿಪ್ಯಾಡ್‌ಗೆ ತೆರಳುವಾಗ ಅವರ ಎದೆ ನೋವು ಮತ್ತಷ್ಟು ಉಲ್ಬಣಗೊಂಡ ಕಾರಣ, ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಬದಲಿಗೆ, ಸವರ್‌ನಲ್ಲಿರುವ ಫಜಿಲತುನ್ನೇಸ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯ ಡಾ. ದೇಬಾಶಿಶ್ ಚೌಧರಿ ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ, ” ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಸಣ್ಣ ಹೃದಯ ಸಮಸ್ಯೆ ಇರಬಹುದೆಂದು ಶಂಕಿಸಲಾಗಿತ್ತು. ಆದರೆ, ಢಾಕಾಗೆ ತೆರಳುವ ಮಾರ್ಗದಲ್ಲಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ನಂತರದ ವೈದ್ಯಕೀಯ ವರದಿಗಳು ಇದು ಗಂಭೀರ ಹೃದಯಾಘಾತ ಎಂದು ದೃಢಪಡಿಸಿವೆ.

ತುರ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ..!

ಪ್ರಸ್ತುತ, ತಮೀಮ್ ಇಕ್ಬಾಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ತಂಡವು ಅವರ ಚೇತರಿಕೆಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವು ವರದಿಗಳ ಪ್ರಕಾರ, ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೃದಯದಲ್ಲಿ ರಕ್ತನಾಳದ ಬ್ಲಾಕೇಜ್ ತೆಗೆಯುವ ಪ್ರಯತ್ನ ನಡೆಯುತ್ತಿದೆ. ಇದು ನಮಗೆಲ್ಲರಿಗೂ ಕಷ್ಟದ ಸಮಯ. ತಮೀಮ್ ಅವರ ಆರೋಗ್ಯಕ್ಕಾಗಿ ದೇಶದ ಜನರು ಪ್ರಾರ್ಥಿಸಬೇಕೆಂದು ಕೋರುತ್ತೇನೆ ಎಂದು ಡಾ. ಚೌಧರಿ ಹೇಳಿದ್ದಾರೆ.

2025ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ..!

ತಮೀಮ್ ಇಕ್ಬಾಲ್ ಅವರು ಜನವರಿ 2025ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಇದು ಅವರ ಎರಡನೇ ನಿವೃತ್ತಿ ಘೋಷಣೆಯಾಗಿತ್ತು. 2023ರಲ್ಲಿ ಮೊದಲ ಬಾರಿಗೆ ಭಾವುಕ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದ್ದ ಅವರು, ಆಗಿನ ಪ್ರಧಾನಿ ಶೇಖ್ ಹಸೀನಾ ಅವರ ಮಧ್ಯಸ್ಥಿಕೆಯಿಂದ 24 ಗಂಟೆಗಳಲ್ಲಿ ತೀರ್ಮಾನವನ್ನು ಹಿಂಪಡೆದಿದ್ದರು. ಆದರೆ, ಈ ವರ್ಷ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ತಮೀಮ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ನಿವೃತ್ತಿಯ ನಂತರ ಅವರು ಸ್ಥಳೀಯ ಪಂದ್ಯಗಳಲ್ಲಿ ಆಡುತ್ತಿದ್ದರು ಮತ್ತು ಕಾಮೆಂಟರಿ ಕೆಲಸದಲ್ಲೂ ತೊಡಗಿಕೊಂಡಿದ್ದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments