ಚಿಕ್ಕೋಡಿ : ಸರ್ಕಾರದ ತುಷ್ಠಿಕರಣದ ರಾಜಕಾರಣಕ್ಕೆ ಚೀಮಾರಿ ಹಾಕಿದ ಪ್ರಮೋದ ಮುತಾಲಿಕ, ಪೆಬ್ರವರಿ ೨೬ ರಿಂದ ಮಾರ್ಚ್ ೨ ರ ವೆಗೆ ನಿಗಧಿಯಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳು, ೨೬ ರಿಂದ ಬೆಳಗ್ಗೆ ೧೦:೩೦ ಕ್ಕೆ ಪರೀಕ್ಷಾ ಪ್ರಾರಂಭದ ಸಮಯ ನಿಗಧಿ, ಮಾರ್ಚ್ ೧ ನೇ ತಾರೀಕು ಶುಕ್ರವಾರ ಬಂದಿದೆ ಅವತ್ತು ಮಾತ್ರ ಮಧ್ಯಾಹ್ನ ಪರೀಕ್ಷೆಗಳನ್ನ ಇಡಲಾಗಿದೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸರ್ಕಾರಕ್ಕೆ ಚೀಮಾರಿ ಹಾಕಿದ ಮುತಾಲಿಕ್.
ನಮಾಜ್ ಮಾಡೋದಕ್ಕೋಸ್ಕರ ಶಿಕ್ಷಣ ವ್ಯವಸ್ಥೆಯನ್ನೆ ಬದಲಾವಣೆ ಮಾಡಲಾಗ್ತಿದೆ ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಗೆ ಅನುಮತಿ ನೀಡಿದ್ದಿರಿ ಹಿಂದೂ ಹುಡುಗಿಯರ ತಾಳಿ ಕಾಲುಂಗುರವನ್ನೂ ಸಹ ತೆಗೆಸುವ ನೀಚರು ನೀವು ಮುಸ್ಲಿಂ ಸುಮುದಾಯಕ್ಕೆ ೧೦ ಸಾವಿರ ಕೋಟಿ ಕೊಡ್ತಿವಿ ಎಂದು ಘೋಷಣೆ ಮಾಡಿದ್ರಿ, ಇನ್ನು ಮಾಡಿಲ್ಲ.ಎಂಥ ಸಂಪ್ರಧಾಯ ನಿಮ್ಮದು ಮಕ್ಕಳಲ್ಲಿ ಭೇಧಭಾವ ಮಾಡ್ತೀರಾ.?
ಕರಸೇವಕರ ಹಳೆ ಕೇಸಗಳನ್ನು ಒಪನ್ ಮಾಡಿದ್ರಿ ಟಿಪ್ಪುಸುಲ್ತಾನ,ಔರಂಗಜೇಬ್,ಬಾಬರನ ಆಡಳಿತ ಮತ್ತೆ ಪ್ರಾರಂಭಿಸಿದ್ದಿರಿ, ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಮಯ ಬದಲಾವಣೆ ಮಾಡಿದನ್ನು ಶ್ರೀರಾಮಸೇನೆ ಖಂಡಿಸುತ್ತೆ, ಸಮಯದಲ್ಲಿ ಬದಲಾವಣೆ ಮಾಡದೇ ಪರೀಕ್ಷೆ ನಡೆಸಿ, ಇಲ್ಲವಾದರೆ ಶ್ರೀರಾಮಸೇನೆ ಹೋರಾಟ ಮಾಡುತತ್ತೇವೆ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ ಮುತಾಲಿಕ್.