Top Newsಸಿನಿಮಾಸುದ್ದಿ

‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ: ಶ್ರೀಲೀಲಾ

ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್ ಅಂಗಳದ ಸೆನ್ಸೇಷನ್ ಹೀರೋಯಿನ್ ಆಗಿದ್ದಾರೆ. ಹೀಗಿರುವಾಗ ತಮಿಳಿನ ಸಿನಿಮಾವೊಂದರ ವಿಚಾರವಾಗಿ ನಟಿ ಸದ್ದು ಮಾಡುತ್ತಿದ್ದಾರೆ. ಕಾರ್ತಿ ನಟನೆಯ ಚಿತ್ರವೊಂದನ್ನು ನಟಿ ತಿರಸ್ಕರಿಸಿದ್ದಾರೆ.

‘ಕಿಸ್’ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಸೆಟಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಮಿಳು ನಟ ಕಾರ್ತಿ ನಟನೆಯ ‘ಸರ್ದಾರ್ ಚಿತ್ರವನ್ನು ಶ್ರೀಲೀಲಾ ರಿಜೆಕ್ಟ್ ಮಾಡಿದ್ದಾರೆ.

‘ಸರ್ದಾರ್ 2’ ಸಿನಿಮಾದಲ್ಲಿ ಇಬ್ಬರೂ ನಾಯಕಿಯರಿದ್ದರು. ಸಿಂಗಲ್ ಹೀರೋಯಿನ್ ಆಗಿ ತೆಲುಗಿನಲ್ಲಿ ಸೈ ಎನಿಸಿಕೊಂಡಿದ್ದಾರೆ. ಆದರೆ ತಮಿಳಿನಲ್ಲಿ ಮತ್ತೊರ್ವ ನಟಿಯ ಜೊತೆ ತೆರೆಹಂಚಿಕೊಳ್ಳಲು ಶ್ರೀಲೀಲಾ ಒಪ್ಪದೇ ಚಿತ್ರವನ್ನು ಕೈಬಿಟ್ಟಿದ್ದಾರೆ.

ಸಕ್ಸಸ್‌ಫುಲ್ ನಟಿ ಎನಿಸಿಕೊಂಡಿರುವ ಶ್ರೀಲೀಲಾಗೆ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಬೇಕೆಂದಿದ್ದಾರೆ. ಕಥೆ ಮತ್ತು ಪಾತ್ರಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಅಂದಹಾಗೆ, ರಾಬಿನ್‌ಹುಡ್‌, ಪವನ್‌ ಕಲ್ಯಾಣ್‌ ಜೊತೆಗಿನ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ 2 ಚಿತ್ರಗಳನ್ನು ನಟಿ ಒಪ್ಪಿದ್ದಾರೆ.

 

Comments (0)

Your email address will not be published. Required fields are marked *

Back to top button