ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಸ್ಪೇನ್ ರಾಷ್ಟ್ರಪತಿ ಪೆಟ್ರೊ ಸ್ಯಾಂಷೆಝ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಪತ್ನಿ ಬೆಗೋನಾ ಗೋಮೆಝ್ ಜತೆಗೂಡಿ ಪೆಟ್ರೊ ಅವರು ಅ.27ರಿಂದ 29ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಸ್ಪೇನ್ ರಾಷ್ಟ್ರಪತಿಯೊಬ್ಬರು 18 ವರ್ಷ ಬಳಿಕ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಇದೇ ವೇಳೆ, ಗುಜರಾತ್‌ನ ವಡೋದರಾದಲ್ಲಿ ಸ್ಥಾಪನೆ ಆಗಿರುವ ‘ಸಿ295 ವಿಮಾನ ಜೋಡಣಾ’ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಆತ್ಮನಿರ್ಭರ ಭಾರತದ ಭಾಗವಾಗಿ ‘ಭಾರತದಲ್ಲೇ ತಯಾರಿಕೆ’ ಘೋಷಣೆಯಂತೆ ಸ್ಪೇನ್ ವೈಮಾನಿಕ ಕ್ಷೇತ್ರದ ವಿಮಾನ ಸಹಿತ ಯಂತ್ರೋಪಕರಣಗಳನ್ನು ಜೋಡಣೆ ಮಾಡುವ ಬೃಹತ್ ಘಟಕ ವಡೋದರಾದಲ್ಲಿ ಕಾರ್ಯಾರಂಭ ಮಾಡುತ್ತಿದೆ. ಅದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಪೇನ್ ಪ್ರಥಮ ದಂಪತಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಪೇನ್ ಹೆಸರಾಂತ ಕಂಪನಿ ‘ಏರ್ ಬಸ್’ ಮತ್ತು ಟಾಟಾ ಸಮೂಹದ ‘ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್’ ಕಂಪನಿ ಜಂಟಿಯಾಗಿ 또 ವಡೋದರಾದಲ್ಲಿ ಸ್ಥಾಪಿಸಿವೆ.


