ಕ್ರಿಕೆಟ್ಜಿಲ್ಲೆ

ಸೌರವ್ ಗಂಗೂಲಿ ಮೊಬೈಲನ್ನೇ ಕದ್ದರು: ಡೇಟಾ ಸೋರಿಕೆ ಚಿಂತೆಯಲ್ಲಿ ಮಾಜಿ ನಾಯಕ !!

Cricket : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮೊಬೈಲ್ ಫೋನ್ ಕಳವಾಗಿದ್ದು, ಪೋನ್ನಲ್ಲಿದ್ದ ಡಾಟಾ ಸಂರಕ್ಷಣೆಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಗೂಲಿ ಫೋನ್ ಅವರ ಮನೆಯಿಂದಲೇ ಕಳವಾಗಿದೆ. ವರದಿಯ ಪ್ರಕಾರ 1.6 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಇದಾಗಿದೆ ಎನ್ನಲಾಗಿದೆ.

ಶನಿವಾರದಂದು ಈ ಘಟನೆ ನಡೆದಿದ್ದು, ಭಾನುವಾರದಂದು ಗಂಗೂಲಿ ಠಾಕುರ್ಪುಕೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈಯಕ್ತಿಕ ಡೇಟಾವನ್ನು ಒಳಗೊಂಡಿರುವ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಫೋನ್ ಇದಾಗಿತ್ತು. ಮನೆಯಿಂದಲೇ ಮೊಬೈಲ್ ಕಾಣೆಯಾಗಿದೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.

ಶನಿವಾರ ಬೆಳಿಗ್ಗೆ 11.30 ರಿಂದ ಅವರ ಫೋನ್ ಪತ್ತೆಯಾಗಿಲ್ಲ. ಪ್ರಸ್ತುತ ಅವರ ಮನೆಗೆ ಬಣ್ಣ ಬಳಿಯುತ್ತಿರುವ ಕೆಲವು ಕಾರ್ಮಿಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನನ್ನ ಫೋನ್ ಮನೆಯಿಂದ ಕಳವಾಗಿದೆ ಎಂದು ನಾನು ಭಾವಿಸುತ್ತೇನೆ. ಫೋನ್ನಲ್ಲಿ ತುಂಬಾ ಸಂಪರ್ಕ ಸಂಖ್ಯೆಗಳಿವೆ. ವೈಯಕ್ತಿಕ ಮಾಹಿತಿ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಪ್ರವೇಶವನ್ನು ಹೊಂದಿದೆ. ಸೂಕ್ಷ್ಮವಾದ ವೈಯಕ್ತಿಕ ಡೇಟಾ ಕೂಡ ಇದೆ. ಅದು ಸೋರಿಕೆಯಾದಲ್ಲಿ ತನಗೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡಬಹುದು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಂಗೂಲಿ ಹೇಳಿದ್ದಾರೆ.

https://youtu.be/HW4G_YZJ5rY?si=I_T9ahRqvttuFUZF

Comments (0)

Your email address will not be published. Required fields are marked *

Back to top button