ದೇಶ/ವಿದೇಶ

ಕನ್ನಡದ ಚಿತ್ರರಂಗದಿಂದ ಸೋನ್ ನಿಗಮ್ ಬ್ಯಾನ್​..!

ಬೆಂಗಳೂರು : ಕನ್ನಡಿಗರ ಕುರಿತು ವಿವಾದ್ಮಕ ಹೇಳಿಕೆ ನೀಡಿದ್ದ ಹಿಂದಿ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ಚಲನಚಿತ್ರೋದ್ಯಮ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ಸೋನು ನಿಗಮ್ ಕರ್ನಾಟಕ ರಜ್ಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಫಿಲಂ ಚೇಂಬರ್ ನಿರ್ಧಾರ ಮಾಡಿದೆ.

ಇಂದು (ಸೋಮವಾರ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ನರಸಿಂಹುಲು ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು ಈ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸೋನು ನಿಗಮ್ ಈ ವರೆಗೂ ಕನ್ನಡಿಗರಿಗೆ ಕ್ಷಮೆ ಕೇಳಿಲ್ಲ.. ಹೀಗಾಗಿ ಅವರು ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಸದಸ್ಯರು ಪಾಲ್ಗೊಳ್ಳದಂತೆ ಸೂಚಿಸಲಾಗಿದೆ ಎಂದು ನರಸಿಂಹುಲು ಹೇಳಿದರು.

ಕನ್ನಡ ಹಾಡು ಕೆಳಿದ್ದಕ್ಕೆ ಪೆಹಲ್ಗಾಮ್​ ದಾಳಿಗೆ ಹೋಲಿಕೆ ಮಾಡಿದ್ದ ಹಿಂದಿ ಸೋನು ನಿಗಮ್ ಮೇಲೆ ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಕ್ಷಮೆ ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಈ ಗಾಯಕ ಉದ್ದಟತನ ಮೆರೆದಿದ್ದಾರೆ ಎಂದು ಇನ್ನೂ ಹೆಚ್ಚಿನ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ಫಿಲಂ ಚೇಂಬರ್ ಈ ನಿರ್ಧಾರ ಕೈಗೊಂಡಿದೆ.

Comments (0)

Your email address will not be published. Required fields are marked *

Back to top button