ಆಸ್ತಿಗಾಗಿ ಮಗನೇ ತಂದೆಗೆ ಬ್ಲಾಕ್‌ಮೇಲ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ತಂದೆಯ ಬಗ್ಗೆ ಅಶ್ಲೀಲ ಸಂದೇಶಗಳನ್ನು ಹಂಚಿಕೊಂಡಿರುವ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್‌ಗೆ ತನ್ನ ಮಗ ಪ್ರಣವ್ ಆಸ್ತಿಗಾಗಿ ತಂದೆಯ ಅಶ್ಲೀಲ ಮೆಸೇಜ್‌ಗಳನ್ನು ಹರಿಬಿಟ್ಟಿದ್ದಾನೆ. ಈ ಹಿನ್ನೆಲೆ ಮದ್ದೂರು ಪೊಲೀಸರು ಮಗ ಪ್ರಣವ್ ಮತ್ತು ತನ್ನ ಸ್ನೇಹಿತರನ್ನ ಬಂಧಿಸಿದ್ದಾರೆ. ಸತೀಶ್ ಐಶ್ವರ್ಯ ಡೆವಲಪರ್ಸ್ ಕಂಪನಿಯ ಉದ್ಯಮಿ ಆಗಿದ್ದು, ಮಗ ಪ್ರಣವ್ ದುಶ್ಚಟಕ್ಕೆ ಬಲಿಯಾಗಿ, ಕೋಟ್ಯಾಂತರ ರೂ.ಗಳನ್ನು ಕಳೆದುಕೊಂಡಿದ್ದಾನೆ.
ಈ ಕಾರಣಕ್ಕೆ ತಂದೆಯ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ತಂದೆ ಹಣ ಕೊಡಲಿಲ್ಲವೆಂದು ಸತೀಶ್ ತಂದೆಯ ಭಾವಚಿತ್ರಕ್ಕೆ ಅಶ್ಲೀಲ ಚಿತ್ರ ಹಾಗೂ ವಾಯ್ಸ್ ಎಡಿಟ್ ಮಾಡಿ ವಾಟ್ಸಾಪ್ ಗ್ರೂಪ್‌ಗೆ ಹಾಕಿದ್ದಾನೆ.. ಇದರಿಂದ ಬೇಸತ್ತ ಸತೀಶ್ ತನ್ನ ಮಗ ಹಾಗೂ ಮಗನಿಗೆ ಸಹಾಯ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪ್ರಣವ್, ಮಹೇಶ, ಈಶ್ವರ್, ಪ್ರೀತಮ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ..