ತುಮಕೂರು:ಹೈಕಮಾಂಡ್ ಭೇಟಿ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ತುಮಕೂರಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವಂತೆ ಸಂಚರಿಸುತಿದ್ದಾರೆ.
ತುಮಕೂರು ಲೋಕಸಭಾ ಮೇಲೆ ಒಂದು ಕಣ್ಣಿಟ್ಟಿರುವ ವಿ.ಸೋಮಣ್ಣ ಹೈಕಮಾಂಡ್ ಭೇಟಿ ಬಳಿಕ ಮತ್ತೆ ಫುಲ್ ಆಕ್ಟಿವ್ ಆಗಿದ್ದಾರೆ.ತುಮಕೂರಿನಲ್ಲಿ ಮತ್ತೆ ಮಿಂಚಿನ ಸಂಚಾರ ಮುಂದುವರಿಸಿದ ಅವರು ಜೆಸಿ ಮಾಧುಸ್ವಾಮಿ ನಾನು ಲೋಕಸಭೆಯ ಪ್ರಬಲ ಆಕಾಂಕ್ಷಿ ಹೇಳಿಕೆಗೆ ಟಕ್ಕರ್ ಕೊಟ್ಟಂತೆ ಇದೆ.
ತಡರಾತ್ರಿ ತುಮಕೂರು ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿದ್ದ ಮಾಜಿ ಸಚಿವರು, ಕಾರ್ಯಕ್ರಮದಲ್ಲೇ ಒಕ್ಕಲಿಗ ಸಮುದಾಯದ ನಾಯಕರುಗಳ ಜೊತೆ ಮಾತುಕತೆ ನಡೆಸಿ ಶುಭ ಸಮಾರಂಭಗಳಲ್ಲಿ ಭಾಗಿಯಾಗುವುದರ ಮೂಲಕ ಸ್ಪರ್ಧೆ ಬಗ್ಗೆ ಸುಳಿವು ನೀಡುತ್ತಿದ್ದಾರೆ. ಬಳಿಕ ಲಿಂಗಾಯತ ಸಮುದಾಯದ ಮುಖಂಡರ ಮನೆಗೆ ಭೇಟಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ವಿ.ಸೋಮಣ್ಣ ಗೆ ಶಾಸಕ ಜ್ಯೊತಿ ಗಣೇಶ್ ಹಾಗೂ ಸುರೇಶ್ ಗೌಡ ಜೊತೆಗಿದ್ದರು.