Wednesday, January 28, 2026
27.9 C
Bengaluru
Google search engine
LIVE
ಮನೆ#Exclusive Newsಸ್ವಾಮೀಜಿಗಳು ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್​ ; ಬಿವೈ ವಿಜಯೇಂದ್ರ

ಸ್ವಾಮೀಜಿಗಳು ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್​ ; ಬಿವೈ ವಿಜಯೇಂದ್ರ

ಶಿವಮೊಗ್ಗ :  ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿವ್ ಪಾಂಚಾಳ್ ಡೆತ್ ನೋಟ್ ನಲ್ಲಿ ಸ್ವಾಮೀಜಿಗಳು, ನಮ್ಮ ಶಾಸಕ ಹಾಗೂ ಚಂದು ಪಾಟೀಲ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾರೆ. ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಸಚಿನ್ ಅವರು ಪ್ರಕರಣನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಿಯಾಂಕ್‌ ಖರ್ಗೆಯವರೇ ನಿಮ್ಮ ಸ್ನೇಹಿತನಾಗಿ ಸಲಹೆ ಕೊಡುತ್ತಿದ್ದೇನೆ, ನಿಮ್ಮ ಪಾತ್ರ ಇಲ್ಲ ಎಂದರೆ ಸಿಬಿಐ ತನಿಖೆಯೇ ನಿಮಗೆ ಸೇಫ್, ಸಿಬಿಐ ತನಿಖೆ ಬಗ್ಗೆ ಅನುಮಾನ ಪಡಬೇಡಿ, ಈ ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್’ಗೆ ಕ್ಲೀನ್​ಚಿಟ್​ ಕೊಟ್ಟಿದ್ದು ಇದೇ ಸಿಬಿಐ.  ಸಿದ್ದರಾಮಯ್ಯನವರನ್ನ ನಂಬಬೇಡಿ ಪ್ರಿಯಾಂಕ್‌ ಖರ್ಗೆ ಅವರೇ, ನಿಮ್ಮ ವಿರುದ್ದವೇ ನಿಮ್ಮ ಪಕ್ಷದಲ್ಲೇ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments