ಬೆಂಗಳೂರು: ಗಾಯಕಿ ಅನನ್ಯ ಭಟ್ ಅವರು ಹಸೆಮಣೆ ಏರಿದ್ದಾರೆ. ಇದೇ ನವೆಂಬರ್ 9 ರಂದು ತಿರುಪತಿಯಲ್ಲಿ ಕುಟುಂಬಸ್ಥರು, ಆಪ್ತ ಬಳಗದ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸೋಜುಗಾದ ಸೂಜಿ ಮಲ್ಲಿಗೆಯ ಖ್ಯಾತಿಯಿಂದ ಜನಪ್ರಿಯರಾದ ಅನನ್ಯ ಅವರು, ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪಡಿ ತುಳಿದಿದ್ದಾರೆ. ವಧು-ವರರು ಸಾಂಪ್ರದಾಯಿಕ ವಸ್ತ್ರಗಳಲ್ಲಿ ಕಂಗೊಳಿಸಿದ್ದರು. ಅನನ್ಯ ಅವರು ಕಾಂಚೀಪುರಂ ಸೀರೆಯಲ್ಲಿ, ಮಂಜು ಅವರು ಧೋತಿ-ಕುರ್ತಾದಲ್ಲಿ ಕಾಣಿಸಿಕೊಂಡರು.

ವರ ಮಂಜು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮ್ಯೂಜಿಷಿಯನ್. ಅವರು ಹಲವು ಬ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದ್ದು, ಜಾಝ್, ರಾಕ್, ಫ್ಯೂಷನ್ ಸೇರಿದಂತೆ ವಿವಿಧ ಶೈಲಿಗಳಲ್ಲಿ ಪರಿಣತಿ ಹೊಂದಿದ್ದಾರೆ.


