ಬೆಂಗಳೂರು : 2024ಕ್ಕೆ ಬಾಯ್ ಹೇಳಿ 2025ಕ್ಕೆ ಹಾಯ್ ಹೇಳಿ ಇಡೀ ವಿಶ್ವವೇ ಸಜ್ಜಾಗಿದೆ. ಇನ್ನೂ ಬೆಂಗಳೂರು ವಿಚಾರಕ್ಕೆ ಬಂದ್ರೆ ನ್ಯೂ ಇಯರ್ ಸೆಲೆಬ್ರೆಷನ್ ಗೆನೂ ಕಮ್ಮಿ ಇರಲ್ಲ. ಸಾರ್ವಜನಿಕರಿಗೆ ಹೊಸ ವರ್ಷ ಸಂಭ್ರಮದ ಚಿಂತೆಯಾದ್ರೆ ಪೊಲೀಸ್ರಿಗೆ ಜನರಿಗೆ ತೊಂದರೆ ಆಗದ ರೀತಿ ಬಂದೋಬಸ್ತ್ ಮಾಡೋ ಟೆನ್ಷನ್. ಈ ಹಿನ್ನೆಲೆ ಹೊಸ ವರ್ಷಕ್ಕೆ ಏನೇನ್ ಪ್ಲಾನ್ ಮಾಡಲಾಗಿದೆ ಅನ್ನೋ ವಿಚಾರಗಳನ್ನ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನದ್ ರಿವಿಲ್ ಮಾಡಿದ್ದಾರೆ.
ಕಮಿಷನರ್ ಪ್ರತಿಕ್ರಿಯಿಸಿ ಈ ವರ್ಷ ಕೂಡ ಹೊಸ ವರ್ಷಾಚರಣೆ ನಡೆಸಲಾಗುತ್ತೆ. ನಗರದಲ್ಲಿ ಯಾವ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಇಲಾಖೆ ಜೊತೆ ಸಭೆ ನಡೆಸಿ ಮಾರ್ಗಸೂಚಿ ತಯಾರಿಸಲಾಗಿದ್ದು, ಬಿಬಿಎಮ್ ಆರ್ಸಿಎಲ್, ಬೆಸ್ಕಾಂ, ಬಿಬಿಎಮ್ಪಿ ಸೇರಿ ಎಲ್ಲಾ ಇಲಾಖೆ ಜೊತೆ ಸಭೆ ನಡೆಸಲಾಗಿದೆ. ಲೈಟಿಂಗ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ಸಹಾಯ ಬಗ್ಗೆ ಚರ್ಚೆ ಮಾಡಲಾಗಿದ್ದು, ಪ್ರಮುಖವಾಗಿ ಎಮ್‌ಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲಿ ಜನಸಂಖ್ಯ ಸೇರುತ್ತೆ ಅಲ್ಲಿ ಒಂದಷ್ಟು ಪ್ಲಾನ್ ಮಾಡಿರೋದಾಗಿ ಹೇಳಿದ್ದಾರೆ.
ಅದ್ರಲ್ಲೂ ಬ್ರಿಗೆಡ್, ಎಮ್‌ಜಿ ರಸ್ತೆಯಲ್ಲಿ ಏಕಮುಖ ಸಂಚಾರ, ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋಣ್ ಕ್ಯಾಮರಾ ಬಳಕೆ ಆಗುತ್ತೆ. ಶ್ವಾನದಳ ಕೂಡ ತಪಾಸಣೆ ಮಾಡಲಾಗುತ್ತೆ.
ಅಲ್ಲದೇ ಈ ವೇಳೆ ನಡೆಯುವ ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ. ಈಗಾಗಲೇ 3 ವಿದೇಶಿ ಡ್ರಗ್ ಪೆಡ್ಲರ್ ಸೇರಿ 70 ಜನರನ್ನ ಬಂಧಿಸಲಾಗಿದೆ.
ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ ಸೇರಿ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಲೇಟ್ ನೈಟ್ ಓಪನ್ ಮಾಡುವ ರೆಸ್ಟೋರೆಂಟ್, ಹೋಟೆಲ್, ಪಬ್ ನವರಿಗೆ ಕೆಲ ಸೂಚನೆ ನೀಡಲಾಗಿದೆ.
ಅವತ್ತು ರಾತ್ರಿ ಎಲ್ಲಾ ರೀತಿಯ ಫ್ಲೈ ಓವರ್ ಕ್ಲೋಸ್ ಇರುತ್ತೆ. ಕುಡಿದು ಫ್ಲೈ ಓವರ್ ಮೇಲೆ ರಂಪಾಟ ಮಾಡುವ, ಅಹಿತಕರ ಘನೆಗಳು ನಡೆಯುವ ಸಾಧ್ಯತೆ ಇದೆ.
ಅಲ್ಲದೇ ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೂ ಕಣ್ಣಿಡಲಾಗಿದ್ದು, ರೇವ್ ಪಾರ್ಟಿ ಸೇರಿ ಹೊರವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೆ ನಿಗಾ ವಹಿಸೋದಾಗಿ ಕಮಿಷನರ್ ತಿಳಿಸಿದ್ದಾರೆ.ಅಷ್ಟೇ ಅಲ್ಲದೆ ಎಮ್ ಜಿ ರೋಡ್ ಮೆಟ್ರೋ ಸ್ಟೇಷನ್ ಈ ಬಾರಿ ಬಂದ್ ಮಾಡಲಾಗುತ್ತೆ. ಯಾಕಂದ್ರೆ ಹೊಸ ವರ್ಷ ಸಂಭ್ರಮ ಆದ ಕೂಡಲೇ ಹೆಚ್ಚು ಜನಸಂಖ್ಯೆ ಸೇರುವ ಸಾಧ್ಯತೆ ಇರುತ್ತೆ.ಆ ದಿನ ರಾತ್ರಿ 11ರಿಂದ 2ಗಂಟೆವರೆಗೂ ಬಂದ್ ಇರುತ್ತೆ ಎಮ್ ಜಿ ರೋಡ್ ಮೆಟ್ರೋ ನಿಂದ ಇಳೀಬೋದು. ಆದ್ರೆ ಹತ್ತೋಕೆ ಅವಕಾಶ ಇರೋದಿಲ್ಲ. ಈ ಬಗ್ಗೆ ಬಿಎಮ್ ಆರ್ ಸಿಎಲ್ ಜೊತೆ ಮಾತನಾಡಲಾಗಿದೆ.ಎಂ ಜಿ ರಸ್ತೆ ಬದಲಾಗಿ ಟ್ರಿನಿಟಿ ಅಥವಾ ಅನಿಲ್ ಕುಂಬ್ಳೆ ರಸ್ತೆ ಬಳಿಯ ಮೆಟ್ರೋ ಹತ್ತಿ ಹೋಗಬಹುದಾಗಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.


