ಬೆಂಗಳೂರು, ಸೆಪ್ಟೆಂಬರ್​ 01: ಹೈಕೋರ್ಟ್​ ಅಂಗಳದಲ್ಲಿ ಮುಡಾ ಕಾನೂನು ಸಮರ ನಡೆಯುತ್ತಿದೆ. ಈವರೆಗೆ ಎರಡು ಬಾರಿ ಹೈಕೋರ್ಟ್​ನಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್​ ಸಂಬಂಧದ ವಿಚಾರಣೆ ಮುಂದೂಡಿಕೆ ಆಗಿದೆ. ಆದರೆ ನಾಳೆ ಸಿಎಂ ಸಿದ್ದರಾಮಯ್ಯಗೆ ಪ್ರಮುಖ ದಿನವೆಂದು ಹೇಳಬಹುದು. ನಾಳೆ ಹೈಕೋರ್ಟ್​ನಲ್ಲಿ ಪ್ರಾಸಿಕ್ಯೂಷನ್ ಕುರಿತು ಅರ್ಜಿ ವಿಚಾರಣೆ ಹಿನ್ನಲೆ ನಾಳಿನ ಮೈಸೂರು ಪ್ರವಾಸದಲ್ಲಿ ಬದಲಾವಣೆ ಆಗಿದ್ದು, ಬೆಳಗ್ಗೆ ಬದಲಾಗಿ ಸಂಜೆ ಮೈಸೂರಿಗೆ ತೆರಳಲಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ನಾಳೆ ಹೈಕೋರ್ಟ್​​ನಲ್ಲಿ ಪ್ರಾಸಿಕ್ಯೂಷನ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. ಆಗಸ್ಟ್​​ 19, 31ರಂದು ಹೈಕೋರ್ಟ್​ನಲ್ಲಿ ನಡೆದಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿತ್ತು. ಹೀಗಾಗಿ ಹೈಕೋರ್ಟ್​​ನಲ್ಲಾಗುವ ಬೆಳವಣಿಗೆಗಳ ಮೇಲೆ‌ ಸಿಎಂ ನಿಗಾ ಇಡಲಿದ್ದಾರೆ. ಹಾಗಾಗಿ ಮನೆಯಲ್ಲೇ ವಾದ, ಪ್ರತಿವಾದದ ಮೇಲೆ ನಿಗಾ ಇಡಲಿದ್ದಾರೆ. ನಾಳೆ ಸಂಜೆ 5ರವರೆಗೆ ಯಾವುದೇ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಇದೇ ಕಾರಣಕ್ಕೆ ನಾಳೆ‌ ಕೈಗೊಂಡಿದ್ದ ಸಿಎಂ ಮೈಸೂರು ಪ್ರವಾಸದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights
Did you find this content engaging?