Wednesday, April 30, 2025
35.6 C
Bengaluru
LIVE
ಮನೆUncategorizedಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ ಸಿಎಂ ಸಿದ್ದು 2.O ಸರ್ಕಾರದ 2ನೇ ಬಜೆಟ್

ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ ಸಿಎಂ ಸಿದ್ದು 2.O ಸರ್ಕಾರದ 2ನೇ ಬಜೆಟ್

ಬೆಂಗಳೂರು : ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ ಆರಂಭವಾಗುತ್ತಿದೆ. ಬಜೆಟ್​​ ಮಂಡನೆಯಲ್ಲಿ ದಾಖಲೆ ಬರೆದ ಸಿದ್ದರಾಮಯ್ಯಗೆ, ಈ ಬಜೆಟ್​​ ಅಧಿವೇಶನ ಹಿಂದಿನಂತಲ್ಲ. ಗ್ಯಾರಂಟಿಗಳ ಯುಗದಲ್ಲಿ ರಾಜ್ಯದ ಪ್ರಗತಿ ಜೊತೆಗೆ ಹೆಜ್ಜೆ ಇರಿಸುವ ಬಹುದೊಡ್ಡ ಸವಾಲು ಸಿದ್ದು ಮುಂದಿದೆ. 10 ದಿನಗಳ ಕಾಲ ನಡೆಯುವ ಜಂಟಿ ಅಧಿವೇಶನ, ಕಾಂಗ್ರೆಸ್​​ನಂತೆ ವಿಪಕ್ಷಗಳು ಎಚ್ಚರಿಕೆ ಹೆಜ್ಜೆ ಇಡುವ ಚಾಲೆಂಜ್​​ ಇದೆ.

ಲೋಕಸಭೆ ಎಲೆಕ್ಷನ್​​​ ಹೊಸ್ತಿಲಲ್ಲೇ ಮತ್ತೊಂದು ಮಹಾ ಸಂಗ್ರಾಮಕ್ಕೆ ವಿಧಾನಸೌಧ ಸಜ್ಜಾಗ್ತಿದೆ. ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗ್ತಿದೆ. ಇಂದಿನಿಂದ ಫೆಬ್ರವರಿ 23ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶ ನಡೆಯಲಿದೆ. ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಅಧಿವೇಶನ ವೇದಿಕೆ ಆಗೋದು ಪಕ್ಕಾ ಆಗಿದೆ. ಲೋಕಸಭಾ ಚುನಾವಣೆಗೆ ಪೂರ್ವತಯಾರಿ ನಡೆಸ್ತಿರುವ ಕಾರಣ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಆಗಲಿದೆ. ರಾಜಕೀಯ ಘಟಾನುಘಟಿಗಳ ಮುಖಾಮುಖಿಗೆ ವಿಧಾನ ಮಂಡಲದ ಬಜೆಟ್ ಅಧಿವೇಶನ ಸಜ್ಜಾಗ್ತಿದೆ.

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಅಂತ ಸಮರ ಸಾರಿದ್ದ ಕಾಂಗ್ರೆಸ್​​​, ಈಗ ಅದೇ ಅಸ್ತ್ರವನ್ನ ಸದಸದನಲ್ಲಿ ಬ್ರಹ್ಮಾಸ್ತ್ರವಾಗಿ ಹೂಡಲು ಸಜ್ಜಾಗಿದೆ. ಇನ್ನು, ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಹ ಹತ್ತಾರು ಹತಾರುಗಳನ್ನ ಸಿದ್ಧಪಡಿಸಿಕೊಂಡಿದೆ. ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದ ಮೂಲಕ ಆರಂಭವಾಗಲಿದೆ. ರಾಜ್ಯಪಾಲ ಥಾವರ್​​ಚಂದ್ ಗೆಹಲೋತ್ ಇಂದು ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸಿದ್ದು ಬಜೆಟ್​​​ ಲೆಕ್ಕಚಾರ!

ಸಿಎಂ ಸಿದ್ದರಾಮಯ್ಯ 2.O ಸರ್ಕಾರದ ಎರಡನೇ ಬಜೆಟ್
ಕಳೆದ ಸಲ ಬಜೆಟ್ ಗಾತ್ರ 3.27 ಲಕ್ಷ ಕೋಟಿ
ಕಳೆದ ಬಾರಿಗಿಂತ ಬಜೆಟ್​ ಗಾತ್ರ ಏರಿಕೆ ಸಾಧ್ಯತೆ
ಐದೂ ಗ್ಯಾರಂಟಿ ಯೋಜನೆ ಮುಂದುವರಿಕೆ
ಸುವರ್ಣ ಸಂಭ್ರಮ ಹೊತ್ತಲ್ಲಿ ಹೊಸ ಯೋಜನೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments