ಹುಬ್ಬಳ್ಳಿ : ಆಸ್ತಿ ವಿಚಾರಕ್ಕೆ ಜನನಿಬಿಡ ಪ್ರದೇಶದಲ್ಲಿ ಕಲಕ್ಕೆ ಇಳಿದ ಅಣ್ಣತಮ್ಮಂದಿರು . ಆಸ್ತಿ ವಿಚಾರಕ್ಕೆ ಮಿನಿ ವಿಧಾನಸೌದಲ್ಲಿಯೇ ಚಾಕು ಹಿಡಿದು ನುಗ್ಗಿದ ಅಣ್ಣತಮ್ಮಂದಿರು. ವಿಚಾರಕ್ಕಾಗಿ ಅಣ್ಣತಮ್ಮಂದಿರಿಂದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ , ಮಹೇಶಗೌಡ ಪಾಟೀಲ್ ಸಹೋದರರಿಂದ ಹನುಮಂತಪ್ಪ ನೀಲಿ ಎಂಬುವವರ ಮೇಲೆ ಹಲ್ಲೆ , ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ನಡೆದ ಘಟನೆ ಉಪನಗರ ಪೊಲೀಸ್ ಠಾಣೆಯ ಪಕ್ಕದಲ್ಲೇ ಇರುವ ಮಿನಿವಿಧಾನಸೌಧ ಹಾಡುಹಗಲೇ ಚಾಕು ಹಿಡಿದುಕೊಂಡು ಮಿನಿ ವಿಧಾನಸೌಧಕ್ಕೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ ಸಹೋದರರು .
ಆಸ್ತಿ ವಿಚಾರಕ್ಕೆ ಹನುಮಂತಪ್ಪ ನೀಲಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾದ ಸಹೋದರರು. ಪೊಲೀಸರ ಭಯವಿಲ್ಲದೇ ಚಾಕುವಿನಿಂದ ಹಲ್ಲೆಗೆ ಮುಂದಾದ ಮಹೇಶಗೌಡ ಪಾಟೀಲ್ ಸಹೋದರರು ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದಂತೆಯೇ ಉಪನಗರ ಠಾಣೆಗೆ ಓಡಿಹೋದ ಹನುಮಂತಪ್ಪ ನೀಲಿ ಹಾಡುಹಗಲೇ ಪೊಲೀಸ್ ಠಾಣೆ ಪಕ್ಕದಲ್ಲಿ ಚಾಕು ಹಿಡಿದು ನುಗ್ಗಿದ ಸಹೋದರರು ಮಹೇಶಗೌಡ ಪಾಟೀಲ್ ಸಹೋದರರು, ಈ ಕೃತ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ . ಸಹೋದರರ ಈ ಕೃತ್ಯದಿಂದಾಗಿ ಕೆಲಕಾಲ ಆತಂಕಕ್ಕೊಳಗಾದ ಸಾರ್ವಜನಿಕರು ಉಪನಗರ ಪೊಲೀಸರಿಂದ ಮೂವರ ವಿಚಾರಣೆ ಮಾಡಿದ್ದಾರೆ.