ಬೆಂಗಳೂರು : ಆರೋಪಿಯನ್ನು 9 ದಿನಗಳ ಕಾಲ ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಆರೋಪದಡಿ ಮಾನವ ಹಕ್ಕು ಆಯೋಗ ದಾಳಿ ಮಾಡಿತ್ತು.ಇದೀಗ ಇನ್ಸ್ಪೆಕ್ಟರ್ ಅಂಬರೀಶ್ಗೆ ನೋಟಿಸ್ ಜಾರಿ ಮಾಡಿದೆ.ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧ ಡಿಟೇಲ್ಸ್ ನೀಡುವಂತೆ ನೋಟಿಸ್ ನೀಡಿದೆ. ಇನ್ನು ವಿಚಾರಣೆಗೆ ಹಾಜರಾಗುವಂತೆ ಕೂಡ ಸೂಚನೆ ನೀಡಿದೆ.. DySP ಸುಧೀರ್ ಹೆಗಡೆ ತಂಡದಿಂದ ವಿಚಾರಣೆ ನಡೆದಿದ್ದು, ವಾರಂಟ್ ಜಾರಿಯಾಗಿದ್ದ ಆರೋಪಿ ಯಾಸಿನ್ ಮೆಹಬೂಬ್ ಖಾನ್ ಎಂಬಾತನನ್ನು ಅಕ್ರಮವಾಗಿ ಬಂಧಿಸಿದ್ದರು.
ಯಾಸಿನ್ ಮೆಹಬೂಬ್ ಖಾನ್ನ್ನು ಇನ್ಸ್ಪೆಕ್ಟರ್ ಅಂಬರೀಶ್ ಸೂಚನೆ ಮೇರೆಗೆ ಕರೆತಂದಿದ್ದ ಆರೋಪ ಕೇಳಿಬಂದಿದೆ. 9 ದಿನಗಳ ಕಾಲ ಇನ್ಸ್ಪೆಕ್ಟರ್ ಅಂಬರೀಶ್ ಅಕ್ರಮವಾಗಿ ಬಂಧನದಲ್ಲಿರಿಸಿದ್ದರು. ಆರೋಪಿಯನ್ನು ಬಂಧಿಸಲು ಕ್ರೈಂ ಕಾನ್ಸ್ಟೇಬಲ್ಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮುಂಬೈಗೆ ಹೋಗಿದ್ರು.ಕಾನ್ಸ್ಟೇಬಲ್ಗಳು ರೂಲ್ಸ್ ವೈಲೇಶನ್ ಮಾಡಿ ಅಕ್ರಮ ಬಂಧನದಲ್ಲಿ ಇಟ್ಟಿದ್ದು ಸಾಬೀತಾಗಿದ್ದು, ಕಮಿಷನರ್ ದಯಾನಂದ್ ಪ್ರಕರಣ ಸಂಬಂಧ ಡಿಸಿಪಿಯಿಂದ ವರದಿ ಕೇಳಿದ್ದಾರೆ. ಅಂಬರೀಶ್ ಕೆ.ಆರ್ ಪುರಂ ಇನ್ಸ್ಪೆಕ್ಟರ್ ಆಗಿದ್ದ ವೇಳೆ MLA ಗೆ ಬೆಳ್ಳಿ ಗಧೆ ನೀಡಿದ್ದರು. ಇದೇ ಇನ್ಸ್ಪೆಕ್ಟರ್ ಅಂಬರೀಶ್ ಮೇಲೆ 3 ವರ್ಷಗಳ ಹಿಂದೆ ಗಂಭೀರ ಆರೋಪವಿದೆ..