ಸಿನಿಮಾ

ರಾಜಸ್ಥಾನದಲ್ಲಿ ಶೂಟಿಂಗ್​ ಕಂಪ್ಲೀಟ್​; ಬೆಂಗಳೂರಿಗೆ ಡೆವಿಲ್​ ಟೀಮ್ ವಾಪಸ್​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜಾಮೀನು ಪಡೆದು ಹೊರಬಂದ ಬಳಿಕ ನಟ ದರ್ಶನ್​​ ಡೆವಿಲ್​​​ ಚಿತ್ರದ  ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೀಗ ಚಿತ್ರದ ಶೂಟಿಂಗ್​ ಬಗ್ಗೆ ಮಾಹಿತಿ ಸಿಕ್ಕಿದ್ದು, ರಾಜಸ್ಥಾನದಲ್ಲಿ ಯಶಸ್ವಿಯಾಗಿ ಚಿತ್ರಿಕರಣ ಮುಗಿಸಿ ನಾಳೆ ಚಿತ್ರತಂಡ ಬೆಂಗಳೂರಿಗೆ ವಾಪಾಸ್​ ಆಗಲಿದೆ.

ಇತ್ತೀಚೆಗೆ ಮೈಸೂರಿನಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಈ ಬೆನ್ನಲ್ಲೇ ರಾಜಸ್ಥಾನಕ್ಕೆ ‘ಡೆವಿಲ್’ ಟೀಮ್ ತೆರಳಿತ್ತು.  ಒಂದು ವಾರಗಳ ಕಾಲ ರಾಜಸ್ಥಾನದಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ ದರ್ಶನ್ & ಟೀಮ್. ಹಾಗಾಗಿ ಏ.2ರಂದು ಬೆಂಗಳೂರಿಗೆ ‘ಡೆವಿಲ್’ ಟೀಮ್ ವಾಪಸ್ಸಾಗಲಿದೆ

ಮುಂದಿನ ಹಂತದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯಲಿದೆ. ಸದ್ಯದಲ್ಲೇ ‘ಡೆವಿಲ್’ ಟೀಮ್ ತೆರಳಲಿದೆ. ಅಂದಹಾಗೆ, ಈ ವರ್ಷದ ಅಂತ್ಯದಲ್ಲಿ ಡೆವಿಲ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

Comments (0)

Your email address will not be published. Required fields are marked *

Back to top button